'ಬುಲೆಟ್ ಪ್ರೂಫ್ ಕಾರು, ಬ್ಯಾಲಿಸ್ಟಿಕ್ ಶೀಲ್ಡ್': ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿಯ ಭದ್ರತೆ ಹೆಚ್ಚಳ

ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಅವರ ಭದ್ರತೆ ಹೆಚ್ಚಿಸಿದ್ದು, ಅವರ ಸಂಚಾರಕ್ಕೆ ಬುಲೆಟ್ ಪ್ರೂಫ್ ಕಾರು ಮತ್ತು ಪೋರ್ಟಬಲ್ ಬ್ಯಾಲಿಸ್ಟಿಕ್ ಶೀಲ್ಡ್ ಅನ್ನು ನೀಡಿದೆ.
ಕೈಲಾಶ್ ವಿಜಯವರ್ಗೀಯಾ
ಕೈಲಾಶ್ ವಿಜಯವರ್ಗೀಯಾ
Updated on

ಕೋಲ್ಕತಾ: ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಅವರ ಭದ್ರತೆ ಹೆಚ್ಚಿಸಿದ್ದು, ಅವರ ಸಂಚಾರಕ್ಕೆ ಬುಲೆಟ್ ಪ್ರೂಫ್ ಕಾರು ಮತ್ತು ಪೋರ್ಟಬಲ್ ಬ್ಯಾಲಿಸ್ಟಿಕ್ ಶೀಲ್ಡ್ ಅನ್ನು ನೀಡಿದೆ.

ವಿಜಯವರ್ಗಿಯಾ ಅವರಿಗಾಗಿ ಬುಲೆಟ್ ಪ್ರೂಫ್ ಎಸ್‌ಯುವಿ ಕಾರು ಉತ್ತರ ಪ್ರದೇಶದಿಂದ ಸೋಮವಾರ ಬೆಳಗ್ಗೆ ಕೋಲ್ಕತ್ತಾಗೆ ಆಗಮಿಸಿದೆ. ಅಲ್ಲದೆ ಅವರ ಭದ್ರತೆಗಾಗಿ ಹೆಚ್ಚುವರಿ ಸಿಐಎಸ್ಎಫ್ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.

ಡಿಸೆಂಬರ್ 10 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ಪಡೆಯ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲ ಕೈಲಾಶ್ ವಿಜಯವರ್ಗಿಯಾ ಅವರ ಭದ್ರತೆಯನ್ನು ಹೆಚ್ಚಿಸಿದೆ.

ಜೆಪಿ ನಡ್ಡಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್‌ ಲೋಕಸಭಾ ಕ್ಷೇತ್ರಕ್ಕೆ ಹೋಗುವ ಸಂದರ್ಭದಲ್ಲಿ ನಡ್ಡಾ ಬೆಂಗಾವಲು ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದೊಣ್ಣೆ ಮತ್ತು ಕೋಲುಗಳಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com