ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಾಪಿಂಗ್ ಮಾಲ್ ನಲ್ಲಿ ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ, ಸಾಮಾಜಿಕ ಜಾಲತಾಣದಲ್ಲಿ ಕರಾಳ ಅನುಭವ ಬಿಚ್ಚಿಟ್ಟ ನಟಿ

ಕೇರಳದ ಶಾಪಿಂಗ್ ಮಾಲ್ ನಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದ್ದು, ಈ ಕುರಿತು ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
Published on

ಕೊಚ್ಚಿನ್: ಕೇರಳದ ಶಾಪಿಂಗ್ ಮಾಲ್ ನಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದ್ದು, ಈ ಕುರಿತು ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.

ಮಲಯಾಳಂನ ಹೆಲೆನ್ ಮತ್ತು ಕಪ್ಪೆಲಾ ಸಿನಿಮಾ ಖ್ಯಾತಿಯ ನಟಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಅವರೇ ಬರೆದುಕೊಂಡಿರುವಂತೆ ಕೊಚ್ಚಿಯ ಶಾಪಿಂಗ್ ಮಾಲ್ ನಲ್ಲಿ ನಡೆದ ಕಹಿ ಘಟನೆಯನ್ನು ಅನ್ನಾ ಬೆನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಕುಟುಂಬದ ಜೊತೆ ಶಾಪಿಂಗ್ ಗೆ ತೆರಳಿದ್ದ ನಟಿ ಅನ್ನಾ ಬೆನ್ ಗೆ ಅನಾಮಿಕ ವ್ಯಕ್ತಿಯೊಬ್ಬ ಆಕೆ ದೇಹವನ್ನು ಕೆಟ್ಟದಾಗಿ ಸ್ಪರ್ಶಿಸಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. 

ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ನಟಿ, ಇಂಥ ಘಟನೆ ಬಗ್ಗೆ ಮಹಿಳೆಯರು ಬಲವಾಗಿ ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸಿದ್ದಾರೆ. 'ಲುಲು ಹೈಪರ್ ಮಾರ್ಕೆಟ್ ಬಳಿ, ತುಂಬಾ ವಿಸ್ತಾರವಾದ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಹಿಂದೆ ನಡೆದುಕೊಂಡು ಬರುತ್ತಿದ್ದರು. ಹೆಚ್ಚು ಜನರಿದ್ದ ಸ್ಥಳವಾಗಿತ್ತು. ಒಬ್ಬ ನನ್ನ ಹಿಂದೆ ನಡೆದುಕೊಂಡು ಬರುವಾಗ ಉದ್ದೇಶಪೂರ್ವಕವಾಗಿ ನನ್ನ ಬೆನ್ನಮೇಲೆ ಕೈ ಹಾಕಿದ್ದಾನೆ. ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಆತ ಅಲ್ಲಿಂದ ಹೊರಟು ಹೋಗಿದ್ದ ಎಂದು ಹೇಳಿದ್ದಾರೆ.

ಅಂತೆಯೇ ಆ ಘಟನೆ ಕುರಿತು ನನಗೆ ಇನ್ನೂ ಕೋಪವಿದೆ. 'ಅಲ್ಲಿ ಏನಾಯಿತು ಎಂದು ನನಗೆ ಅರ್ಥವಾಗಿದೆ ಎಂದು ಅವನಿಗೆ ತಿಳಿದಿದೆ. ನಾನು ಏನು ಹೇಳಬೇಕೆಂದು ತಿಳಿಯಲಿಲ್ಲ. ಮತ್ತೆ ಇಬ್ಬರು ಫಾಲೋಮಾಡಿಕೊಂಡು ಬಂದರು, ನನ್ನ ಜೊತೆ ಮಾತನಾಡಲು ಬಯಸಿದರು, ನನ್ನ  ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದರು. ನನ್ನ ತಾಯಿಯನ್ನು ನೋಡಿದ ನಂತರ ಅವರು ಅಲ್ಲಿಂದ ಹೊರಟು ಹೋದರು. ಮಹಿಳೆಯರು ಮನೆಯಿಂದ ಹೊರಹೋದಾಗ ಜಾಗರೂಕರಾಗಿರಬೇಕು. ಮನೆಯಿಂದ ಹೊರನಡೆದಾಗ ಪ್ರತಿ ಕ್ಷಣವೂ ನಾವು ಜಾಗರೂಕರಾಗಿರಬೇಕು. ಬಟ್ಟೆ ಬಗ್ಗೆ ಆಗಾಗ ನೋಡಿಕೊಳ್ಳುತ್ತಿರಬೇಕು, ಜನಸಂದಣಿ ಇದ್ದ ಜಾಗದಲ್ಲಿ ನನ್ನ ಕೈಗಳಿಂದ ನನ್ನ ಎದೆಯ ಭಾಗವನ್ನು ಕಾಪಾಡಿಕೊಳ್ಳಬೇಕು. ಇದನ್ನೆಲ್ಲ ನೋಡಿದಾಗ ನನ್ನ ತಾಯಿ, ಸಹೋದರಿ, ಸ್ನೇಹಿತೆಯರಿಗೂ ಇದೇ ರೀತಿ ಆಗಿರಬಹುದೇನೋ ಅಂದುಕೊಳ್ಳುತ್ತೇನೆ. ಇದೆಲ್ಲಾ ಇಂಥ ಕೆಟ್ಟ ಪುರುಷರಿಂದ. ನೀವು ನಮ್ಮ ಸುರಕ್ಷತೆಯನ್ನು ಕಿತ್ತುಕೊಳ್ಳುತ್ತೀರಿ. ನೀವು ನಮ್ಮ ಆರಾಮ ಮತ್ತು ನಮ್ಮ ಸ್ತ್ರೀತ್ವದ ಸಂತೋಷವನ್ನು ಕಸಿಯುತ್ತಿದ್ದೀರಿ, ನಾನು ನಿಮ್ಮಂತವರನ್ನು ತಿರಸ್ಕರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 

X

Advertisement

X
Kannada Prabha
www.kannadaprabha.com