ಬರದಿದ್ದರೆ ಸಾಯುತ್ತೇನೆ ಎಂದು ಬೆದರಿಕೆ ಹಾಕಿ ಮಹಿಳೆ ಮೇಲೆ ಸರಣಿ ಅತ್ಯಾಚಾರ; 'ಝಿದ್ದಿ ಲಡ್ಕ' ವಿರುದ್ಧ ಸರಣಿ ಪೊಲೀಸ್ ಪ್ರಕರಣ ದಾಖಲು!

ಮಹಿಳೆಯೊಬ್ಬರಿಗೆ ಭಾವನಾತ್ಮಕ ಬೆದರಿಕೆ ಹಾಕಿ ಹೊಟೆಲ್ ಗೆ ಕರೆಸಿಕೊಂಡು ಸರಣಿ ಅತ್ಯಾಚಾರ ನಡೆಸಿದ್ದ ಯುವಕನ ವಿರುದ್ಧ ಇದೀಗ ಪೊಲೀಸರು ಸರಣಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಅಹ್ಮದಾಬಾದ್: ಮಹಿಳೆಯೊಬ್ಬರಿಗೆ ಭಾವನಾತ್ಮಕ ಬೆದರಿಕೆ ಹಾಕಿ ಹೊಟೆಲ್ ಗೆ ಕರೆಸಿಕೊಂಡು ಸರಣಿ ಅತ್ಯಾಚಾರ ನಡೆಸಿದ್ದ ಯುವಕನ ವಿರುದ್ಧ ಇದೀಗ ಪೊಲೀಸರು ಸರಣಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಹೌದು..ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿಗೆ ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಮೂಲಗಳ ಪ್ರಕಾರ ಮಧ್ಯಪ್ರದೇಶದ ಉಜ್ಜಯಿನಿಯ 22 ವರ್ಷದ ಯುವತಿಯ ಮೇಲೆ 20 ವರ್ಷದ ಯುವಕ ಪದೇ ಪದೇ  ಅತ್ಯಾಚಾರ ಎಸಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯುವಕನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ ಗಳಡಿಯಲ್ಲಿ ಸರಣಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಅಹ್ಮದಾಬಾದ್ ಮೂಲದ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿ ಸ್ನೇಹ ಬೆಳೆಸಿದ್ದಾನೆ. ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಆಕೆ ಅದನ್ನು ಅಕ್ಸೆಪ್ಟ್ ಮಾಡಿದ ಬಳಿಕ ಆಕೆಯೊಂದಿಗೆ ನಿರತಂರವಾಗಿ ಚಾಟ್ ಮಾಡಿ ಆಕೆಯ ಸ್ನೇಹ ಸಂಪಾದಿಸಿದ್ದಾನೆ. ಬಳಿಕ ಚಾಟ್ ವೇಳೆ ನಾನು ನಿನ್ನನ್ನು  ಪ್ರೀತಿಸುತ್ತಿರುವುದಾಗಿ ಹೇಳಿದ ಯುವಕ ಒಮ್ಮೆ ನಿನ್ನನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಕೈ ಗಳ ಮೇಲೆ ಬ್ಲೇಡ್ ನಿಂದ ಕುಯ್ದುಕೊಂಡ ಫೋಟೋಗಳನ್ನು ಯುವತಿಗೆ ಕಳುಹಿಸಿ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆತನ ಬೆದರಿಕೆಯಿಂದಾಗಿ  ಯುವತಿ ಅಹ್ಮದಾಹಬಾದ್ ಗೆ ತೆರಳಿದ್ದು, ಈ ವೇಳೆ ಆಕೆಯನ್ನು ಹೊಟೆಲ್ ಗೆ ಕರೆದುಕೊಂಡ ಹೋದ ಯುವಕ ಸತತ 2 ದಿನ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

'ಆರೋಪಿಯ ನಿಜವಾದ ಹೆಸರು ನನಗೆ ತಿಳಿದಿರಲಿಲ್ಲ. 'ಜಿದ್ದಿ ಲಡ್ಡಾ' ಎಂಬ ಬಳಕೆದಾರನ ಹೆಸರಿನ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆಯಲಾಗಿತ್ತು. ಜೂನ್ 2019ರಲ್ಲಿ ನನಗೆ ಫಾಲೋ ರಿಕ್ವೆಸ್ಟ್ ಕಳುಹಿಸಿದ. ನಾನು ರಿಕ್ವೆಸ್ಟ್ ಅಕ್ಸೆಪ್ಪ್ ಮಾಡಿದ ಬಳಿಕ ಪ್ರತಿ ದಿನ ಚಾಟ್ ಮಾಡಲು ಆರಂಭಿಸಿದ. ಚಾಟ್ ವೇಳೆ  ಸ್ನೇಹ-ಸಲುಗೆ ಆರಂಭವಾಯಿತು. ಆಗಸ್ಟ್ ತಿಂಗಳಲ್ಲಿ ಯುವಕ ತನ್ನ ಕೈ ಕುಯ್ದುಕೊಂಡಿದ್ದ ಫೋಟೋವನ್ನು ಕಳುಹಿಸಿದ್ದ. ಅಲ್ಲದೆ ನನ್ನನ್ನು ಭೇಟಿ ಮಾಡಲು ಅಹ್ಮದಾಬಾದ್‌ಗೆ ಆಗಮಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರಿಂದ  ಯುವಕನನ್ನು ಭೇಟಿಯಾಗಲು ನಾನು ಅಹ್ಮದಾಬಾದ್‌ನ ಖಾದಿಯಾಗೆ ಆಗಮಿಸಿದೆ. ಬಳಿಕ ರಾಯಪುರದ ಹೋಟೆಲ್‌ಗೆ ಕರೆದೊಯ್ದು ಸತತ ಎರಡು ದಿನ ಹಲವು ಬಾರಿ ಅತ್ಯಾಚಾರ ಎಸಗಿದ. ಬಳಿಕ ನನ್ನನ್ನು ವಿವಾಹವಾಗುವುದಾಗಿ ನಂಬಿಸಿದ ಎಂದು ಯುವತಿ ಆರೋಪಿಸಿದ್ದಾಳೆ.

ಅಲ್ಲದೆ ಇದೇ ರೀತಿ ಆರೋಪಿ ವಿನಂತಿ ಮೇರೆಗೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಯುವತಿ ಮತ್ತೊಂದು ಬಾರಿ ಅಹ್ಮದಾಬಾದ್‌ಗೆ ಭೇಟಿ ನೀಡಿದ್ದಾಳೆ. ಈ ವೇಳೆ ಸಹ ಯುವತಿಯನ್ನು ಗೆಸ್ಟ್ ಹೌಸ್‌ಗೆ ಕರೆದೊಯ್ದು ಯುವಕ ಅತ್ಯಾಚಾರ ಎಸಗಿದ್ದಾನೆ. ಅಕ್ಟೋಬರ್ ವರೆಗೆ ಯುವಕ ಸಂಪರ್ಕದಲ್ಲೇ ಇದ್ದ ಬಳಿಕ  ನಾಪತ್ತೆಯಾಗಿದ್ದಾನೆ. ಒಂದು ತಿಂಗಳು ಕಾದರೂ ಯುವಕ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸ್ ದೂರು ನೀಡುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. 

ಪ್ರಸ್ತುತ ಉಜ್ಜಯಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲುಸ ಯುವತಿ ನಿರ್ಧರಿಸಿದ್ದು, ದೂರು ದಾಖಲಿಸಿಕೊಂಡ ಉಜ್ಜಯಿನಿ ಪೊಲೀಸರು ಪ್ರಕರಣವನ್ನು ಅಹ್ಮದಾಬಾದ್‌ನ ಖಾದಿಯಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com