ವಿರುದ್ಧವಾಯ್ತು ಇದೀಗ ಸಿಎಎ ಪರ ಆರಂಭಗೊಂಡ ಪ್ರತಿಭಟನೆ: ಜಾಮಿಯಾ ವಿವಿ ಬಳಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು

ಪೌರತ್ವ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಬಳಿಕ ಇಡೀ ದೇಶವೇ ಹೊತ್ತಿ ಉರಿಯುವ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈಗಲೂ ಪ್ರತಿಭಟನೆಗಳು ಮುಂದುವರೆಯುತ್ತಿವೆ. ಕಾಯ್ದೆ ವಿರುದ್ದದ ಪ್ರತಿಭಟನೆಗಳ ನಡುವಲ್ಲೇ, ಇದೀಗ ಕಾಯ್ದೆ ಪರವಾಗಿ ಪ್ರತಿಭಟನೆ ರಾಜಧಾನಿ ದೆಹಲಿಯಲ್ಲಿ ಆರಂಭಗೊಂಡಿದೆ. 
ವಿರುದ್ಧವಾಯ್ತು ಇದೀಗ ಸಿಎಎ ಪರ ಆರಂಭಗೊಂಡ ಪ್ರತಿಭಟನೆ: ಜಾಮಿಯಾ ವಿವಿ ಬಳಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು
ವಿರುದ್ಧವಾಯ್ತು ಇದೀಗ ಸಿಎಎ ಪರ ಆರಂಭಗೊಂಡ ಪ್ರತಿಭಟನೆ: ಜಾಮಿಯಾ ವಿವಿ ಬಳಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು

ನವದೆಹಲಿ: ಪೌರತ್ವ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಬಳಿಕ ಇಡೀ ದೇಶವೇ ಹೊತ್ತಿ ಉರಿಯುವ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈಗಲೂ ಪ್ರತಿಭಟನೆಗಳು ಮುಂದುವರೆಯುತ್ತಿವೆ. ಕಾಯ್ದೆ ವಿರುದ್ದದ ಪ್ರತಿಭಟನೆಗಳ ನಡುವಲ್ಲೇ, ಇದೀಗ ಕಾಯ್ದೆ ಪರವಾಗಿ ಪ್ರತಿಭಟನೆ ರಾಜಧಾನಿ ದೆಹಲಿಯಲ್ಲಿ ಆರಂಭಗೊಂಡಿದೆ. 

ರಾಜಧಾನಿ ದಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ಕಾಯ್ದೆ ಪರವಾಗಿ ನೂರಾರು ಪ್ರತಿಭಟನಾಕಾರರು ಜಮಾವಣೆಗೊಂಡಿದ್ದು, ನಮಗೆ ಭದ್ರತೆ ಇಲ್ಲ ಎಂದು ಘೋಷಣೆ ಕೂಗಿ, ಕಾಯ್ದೆ ಪರವಾಗಿ ಪ್ರತಿಭಟನೆ ಆರಂಭಿಸಿದ್ದಾರೆ. 

ಪ್ರತಿಭಟನೆ ನಡೆಸುತ್ತಿರುವವರೂ ಕೂಡ ವಿದ್ಯಾರ್ಥಿಗಳೇ ಎಂದು ಹೇಳಲಾಗುತ್ತಿದ್ದು, ಪ್ರತಿಭಟನೆಗೆ ಸ್ಥಳೀಯ ನಿವಾಸಿಗಳೂ ಕೂಡ ಕೈಜೋಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. 

ಪ್ರತಿಭಟನೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ. ದೇಶದೊಳಗಿರುವ ಉಗ್ರರನ್ನು ಗುಂಡಿಟ್ಟು ಕೊಲ್ಲಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಅಲ್ಲದೆ, ಕೈಗಳಲ್ಲಿ ರಾಷ್ಟ್ರಗಳನ್ನು ಹಿಡಿದು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಾರೆ 

ಇನ್ನು ಈ ಪ್ರತಿಭಟನೆ ಕುರಿತು ದೆಹಲಿಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಕುಮಾರ್ ಜ್ಞಾನೇಶ್ ಅವರು ಯಾವುದೇ ಪ್ರತಿಕ್ರಿಯಗಳನ್ನು ನೀಡಿಲ್ಲ. 

 ವರದಿಗಳ ಪ್ರಕಾರ ಪ್ರತಿಭಟನೆ ನಡೆಸಿದ್ದವರು, ಈ ಹಿಂದೆ ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಹಿರಿಯ ವಿದ್ಯಾರ್ಥಿಗಳೆಂದು ಹೇಳಲಾಗುತ್ತಿದೆ. 

ನಮಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ. ಗೂಂಡಾಗಳಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಗುಂಡುಗಳು ಹಾರುತ್ತಿವೆ. ನಮ್ಮ ಮೇಲೆ ದಾಳಿಗಳು ನಡೆಯುತ್ತಿವೆ. ಆದರೆ, ಪೊಲೀಸರು ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಜಾಮಿಯಾ ವಿದ್ಯಾರ್ಥಿಯೊಬ್ಬರು ಹೇಳಿಕೊಂಡಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಶಹೀನ್ ಬಾಗ್ ಪ್ರತಿಭಟನೆ ದುರುದ್ದೇಶದಿಂದ ಕೂಡಿದ್ದು, ಶಾಂತಿ ಕದಡುವ ಯತ್ನವಾಗಿದೆ. ಪ್ರತಿಭಟನೆಯ ನಿಜವಾದ ಉದ್ದೇಶ 370 ವಿಧಿ ರದ್ದು ಹಾಗೂ ರಾಮಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ವಿರುದ್ಧವಾಗಿದೆ. ತ್ರಿವಳಿ ತಲಾಖ್ ಕಾಯ್ದೆ ಜಾರಿಗೊಂಡಿದ್ದೂ ಕೂಡ ಅವರ ಈ ಪ್ರತಿಭಟನೆಯ ನೋವಾಗಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com