ದೆಹಲಿ ಚುನಾವಣೆ; ಗಣ್ಯಾತಿಗಣ್ಯರಿಂದ ಮತ ಚಲಾವಣೆ

ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಬೆಳಗ್ಗೆಯಿಂದ ಗಣ್ಯಾತಿಗಣ್ಯರು ಆಗಮಿಸಿ ಮತಚಲಾಯಿಸುತ್ತಿದ್ದಾರೆ.
ಮತ ಹಕ್ಕು ಚಲಾಯಿಸಿದ ರಾಷ್ಟ್ರಪತಿ ಕೋವಿಂದ್ ದಂಪತಿ
ಮತ ಹಕ್ಕು ಚಲಾಯಿಸಿದ ರಾಷ್ಟ್ರಪತಿ ಕೋವಿಂದ್ ದಂಪತಿ
Updated on: 

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಬೆಳಗ್ಗೆಯಿಂದ ಗಣ್ಯಾತಿಗಣ್ಯರು ಆಗಮಿಸಿ ಮತಚಲಾಯಿಸುತ್ತಿದ್ದಾರೆ.

ರಾಷ್ಟ್ರಪತಿ ಕೋವಿಂದ್ ದಂಪತಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಗಾಂಧಿ ಸೇರಿದಂತೆ ಹಲವು ನಾಯಕರು ತಮ್ಮ ಹಕ್ಕು ಚಲಾಯಿಸಿದರು.

ಅಂತೆಯೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಕೇಂದ್ರ ಹಣಕಾಸು ಸಚಿವ ಹರ್ಷವರ್ಧನ್ ಮತ್ತು ಬಿಜೆಪಿ ನಾಯಕ ರಾಮ್ ಮಾಧವ್ ಮತ ಚಲಾಯಿಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ತಮ್ಮ ಪೋಷಕರ ಆಶಿರ್ವಾದ ಪಡೆದ ನಂತರ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಅವರೊಂದಿಗೆ ಪತ್ನಿ ಹಾಗೂ ಪೋಷಕರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com