ಶ್ರೀಲಂಕಾದಲ್ಲಿ ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಬಗ್ಗೆ ರಾಜಪಕ್ಸೆಯೊಂದಿಗೆ ಮೋದಿ ಚರ್ಚೆ
ಶ್ರೀಲಂಕಾದಲ್ಲಿ ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಬಗ್ಗೆ ರಾಜಪಕ್ಸೆಯೊಂದಿಗೆ ಮೋದಿ ಚರ್ಚೆ

ಶ್ರೀಲಂಕಾದಲ್ಲಿ ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಬಗ್ಗೆ ರಾಜಪಕ್ಸೆಯೊಂದಿಗೆ ಮೋದಿ ಚರ್ಚೆ

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ‘ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಮತ್ತು ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಚರ್ಚಿಸಿದರು.

ನವದೆಹಲಿ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ‘ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಮತ್ತು ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಚರ್ಚಿಸಿದರು.

ಪರಸ್ಪರ ಹಿತಾಸಕ್ತಿಯ ಅಂತಾರಾಷ್ಟ್ರೀಯ ವಿಷಯಗಳನ್ನೊಳಗೊಂಡ ಚರ್ಚೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು.

‘ಜನರ ನಡುವಿನ ಸಂಬಂಧ ಹೆಚ್ಚಿಸುವುದು, ಪ್ರವಾಸೋದ್ಯಮ ಉತ್ತೇಜಿಸುವುದು ಮತ್ತು ಸಂಪರ್ಕ ಸುಧಾರಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ.’ ಎಂದು ಮೋದಿ ಹೇಳಿದ್ದಾರೆ.

ದ್ವೀಪರಾಷ್ಟ್ರದಲ್ಲಿ ಅಲ್ಪಸಂಖ್ಯಾತ ತಮಿಳು ಸಮುದಾಯಕ್ಕೆ ಶ್ರೀಲಂಕಾ ಸರ್ಕಾರ ಅಧಿಕಾರ ನೀಡುವಿಕೆ, ನ್ಯಾಯ, ಗೌರವ ಮತ್ತು ಸಮಾನತೆ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com