'ವಿದೇಶಿ ಮಹಿಳೆಗೆ ಹುಟ್ಟಿದವರು ದೇಶದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು': ಬಿಜೆಪಿ ಸಂಸದ ವಿವಾದಾತ್ಮಕ ಹೇಳಿಕೆ 

ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಗೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ದಿವಂಗತ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆ ಬಗ್ಗೆ ನೀಡಿದ್ದ ಹೇಳಿಕೆ ವಿವಾದವಾಗಿದ್ದು ಇದೀಗ ಮತ್ತೊಬ್ಬ ಬಿಜೆಪಿ ಸಂಸದರು ಕೂಡ ಅದೇ ರೀತಿಯ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಸೋನಿಯಾ ಗಾಂಧಿ-ರಾಜೀವ್ ಗಾಂಧಿ (ಸಂಗ್ರಹ ಚಿತ್ರ)
ಸೋನಿಯಾ ಗಾಂಧಿ-ರಾಜೀವ್ ಗಾಂಧಿ (ಸಂಗ್ರಹ ಚಿತ್ರ)
Updated on

ಭೋಪಾಲ್: ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಗೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ದಿವಂಗತ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆ ಬಗ್ಗೆ ನೀಡಿದ್ದ ಹೇಳಿಕೆ ವಿವಾದವಾಗಿದ್ದು ಇದೀಗ ಮತ್ತೊಬ್ಬ ಬಿಜೆಪಿ ಸಂಸದರು ಕೂಡ ಅದೇ ರೀತಿಯ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.


ಮಧ್ಯ ಪ್ರದೇಶದ ಮಂಡ್ ಸೌರ್ ಕ್ಷೇತ್ರದ ಬಿಜೆಪಿ ಸಂಸದ ಸುಧೀರ್ ಗುಪ್ತ, ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮದುವೆ ಬಗ್ಗೆ ಟೀಕಿಸಿದ್ದಾರೆ. ದೇಶದ ಆಡಳಿತದಲ್ಲಿ ಮೂಗು ತೂರಿಸುವ ಮೂಲಕ ವಿದೇಶಿ ಮಹಿಳೆಗೆ ಹುಟ್ಟಿದ ಮಗನಿಂದ ದೇಶ ಈಗಾಗಲೇ ಸಾಕಷ್ಟು ದುಷ್ಪರಿಣಾಮ ಎದುರಿಸುತ್ತಿದೆ ಎಂದಿದ್ದಾರೆ. 


ನಿನ್ನೆ ಮಂಡಸೌರ್ ಕ್ಷೇತ್ರದಲ್ಲಿ ಪತ್ರಕರ್ತರು ರಾಹುಲ್ ಗಾಂಧಿ ಟ್ವೀಟ್ ಬಗ್ಗೆ ಅವರನ್ನು ಕೇಳಿದಾಗ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಇಡೀ ದೇಶ ಸ್ಮರಿಸುತ್ತಿರುವಾಗ ರಾಹುಲ್ ಗಾಂಧಿಯವರು ಮಾತ್ರ ಲಜ್ಜೆಗೆಟ್ಟವರಂತೆ ದಾಳಿ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅವರು ನಮ್ಮ ದೇಶದವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದರು.

ಬಿಜೆಪಿ ಸಂಸದ ಸುಧೀರ್ ಗುಪ್ತ

ಅದೇ ಆಕ್ರೋಶ, ಸಿಟ್ಟಿನಲ್ಲಿ ತಮ್ಮ ಮಾತುಗಳನ್ನು ಮುಂದುವರಿಸಿದ ಗುಪ್ತ, ಪುಲ್ವಾಮಾ ದಾಳಿಯಿಂದ ಯಾರಿಗೆ ಲಾಭವಾಗಿದೆ ಎಂದು ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಕೇಳುತ್ತಾರೆ.ಹಾಗಾದರೆ ಇಟಲಿಯನ್ ಮಹಿಳೆ ಮತ್ತು ಭಾರತೀಯನ ನಡುವೆರಾಜೀವ್ ಗಾಂಧಿ-ಸೋನಿಯಾ ಗಾಂಧಿ) ಮದುವೆ ಆಗಿದ್ದಕ್ಕೆ ಯಾರಿಗೆ ಲಾಭವಾಗಿದೆ ಎಂದು  ನಾವು ಕೇಳಬೇಕಾಗುತ್ತದೆ. ಇವರಿಬ್ಬರ ಮದುವೆಯಿಂದ  ದೇಶಕ್ಕೆ ಕನಿಷ್ಠ ಲಾಭವಾದರೂ ಆಗಿದೆಯೇ ಎಂದು ಕೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com