ಬಂಗಾಳಿ ಹಿರಿಯ ನಟ, ರಾಜಕಾರಣಿ ತಪಸ್ ಪಾಲ್ ನಿಧನ

ಬಂಗಾಳಿ ಹಿರಿಯ ನಟ ಹಾಗೂ ರಾಜಕಾರಣಿ ತಪಸ್ ಪಾಲ್ ಅವರು ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಟ ತಪಸ್ ಪಾಲ್
ನಟ ತಪಸ್ ಪಾಲ್

ನವದೆಹಲಿ/ಮುಂಬೈ: ಬಂಗಾಳಿ ಹಿರಿಯ ನಟ ಹಾಗೂ ರಾಜಕಾರಣಿ ತಪಸ್ ಪಾಲ್ ಅವರು ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 61 ವರ್ಷ ವಯಸ್ಸಾಗಿದ್ದ ಅವರು, ಇಂದು ಮುಂಜಾನೆ 3.35 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಮುಂಬೈಗೆ ತನ್ನ ಪುತ್ರಿಯ ಮನೆಗೆ  ತೆರಳಿದ್ದ ಅವರು ಕೊಲ್ಕತ್ತಾಕ್ಕೆ ವಾಪಾಸ್ ಆಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಎದೆನೋವು ಕಾಣಿಸಿಕೊಂಡಿದೆ. ನಂತರ ಜುಹುವಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ

ಪಾಲ್,  ಕಳೆದ ಎರಡು ವರ್ಷಗಳಿಂದ ಅನೇಕ ಬಾರಿ  ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಕೃಷ್ಣನಗರದಿಂದ ಎರಡು ಬಾರಿ ಸಂಸತ್ ಸದಸ್ಯರು ಹಾಗೂ ಅಲಿಪೊರ್ ನಿಂದ ಒಮ್ಮೆ ವಿಧಾನಸಭೆಗೆ ಆಯ್ಕೆಯಾಗಿದ್ದ ಪೌಲ್, ಪುತ್ರಿ ಹಾಗೂ ಪತ್ನಿಯನ್ನು ಆಗಲಿದ್ದಾರೆ. 

ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದಲ್ಲಿ ಡಿಸೆಂಬರ್ 2016ರಲ್ಲಿ ಬಂಧನಕ್ಕೊಳಗಾದ ನಂತರ ಪೌಲ್ ಚಿತ್ರರಂಗದಿಂದ ದೂರ ಉಳಿದಿದ್ದರು. 13 ತಿಂಗಳ ನಂತರ ಜಾಮೀನು ಸಿಕ್ಕಿತ್ತು. 

ರೋಮ್ಯಾಂಟಿಕ್ ಹಿರೋ ಆಗಿ ಪ್ರೇಕ್ಷಕರ ಮನ ಕದ್ದಿದ್ದ ಪಾಲ್,  1989ರಲ್ಲಿ ದಾದರ್ ಕಿರ್ತಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಸಾಹೇಬ್, ಅನುರಾಗರ್ ಚೊಯನ್ , ಅಮರ್ ಬಂಧನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಪೌಲ್, 1981ರಲ್ಲಿ ಸಾಹೇಬ್ ಚಿತ್ರಕ್ಕಾಗಿ ಫಿಲಂ ಪೇರ್ ಪ್ರಶಸ್ತಿ ಪಡೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com