ಕೊಲ್ಕತ್ತಾ: ಆಸಿಡ್ ದಾಳಿಗೊಳಗಾದ ಸಂತ್ರಸ್ತೆಯನ್ನು ರಕ್ಷಿಸಿ, ಮದುವೆಯಾದ ಯುವಕ!

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಅದೇ ರೀತಿಯಲ್ಲಿ ಇಲ್ಲಿನ ದುಮ್ ದಾಮ್ ಪ್ರದೇಶದ ಯುವಕನೊಬ್ಬ, ಆಸಿಡ್ ದಾಳಿಗೊಳಗಾದ ಸಂತ್ರಸ್ತೆಯನ್ನು ವರ್ಷನುಗಟ್ಟಲೇ ಕಾಪಾಡಿ ಇದೀಗ ಮದುವೆಯಾಗಿದ್ದಾನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಅದೇ ರೀತಿಯಲ್ಲಿ ಇಲ್ಲಿನ ದುಮ್ ದಾಮ್ ಪ್ರದೇಶದ ಯುವಕನೊಬ್ಬ, ಆಸಿಡ್ ದಾಳಿಗೊಳಗಾದ ಸಂತ್ರಸ್ತೆಯನ್ನು ವರ್ಷನುಗಟ್ಟಲೇ ಕಾಪಾಡಿ ಇದೀಗ ಮದುವೆಯಾಗಿದ್ದಾನೆ. 

ಸಂಚಿತಾ ಯಾದವ್ ಆಸಿಡ್ ದಾಳಿಗೊಳಗಾದ ಸಂತ್ರಸ್ತೆ. ಸೆಪ್ಟೆಂಬರ್ 2014ರಲ್ಲಿ ಸಂಚಿತಾ ಯಾದವ್ ಗೆ ತೊಂದರೆ ಆರಂಭವಾಗುತ್ತದೆ. ಆಕೆಯ ಪ್ರಿಯತಮ ಮುಖಕ್ಕೆ ಆಸಿಡ್ ಎರಚಿ ಕೆಳಗೆ ತಳ್ಳಿದ್ದರಿಂದ ಮುಖದ ಮೇಲಿನ ಗಂಭೀರ ಗಾಯಗಳಿಂದ ತೀವ್ರ ತೊಂದರೆಪಡುವಂತಾಗಿತ್ತು. ಬಲಗಣ್ಣು ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾಳೆ. 

ಆ ಸಂಜೆಯನ್ನು ಮರೆಯಲು ಸಾಧ್ಯವಿಲ್ಲ, ಬಾಟಲಿ ಹಿಡಿದು ನನ್ನ ಮುಂದೆ ನಿಂತಿದ್ದ ಆತನನ್ನು ನೋಡುತ್ತಿರುವಂತೆ ಮುಖಕ್ಕೆ ಆಸಿಡ್ ಬಿದ್ದು, ತೀವ್ರವಾಗಿ ಉರಿ ಕಂಡುಬಂದಿತ್ತು. ನಾನು ಕಿರುಚಿದ ತಕ್ಷಣ ಅಲ್ಲಿಗೆ ಬಂದ ಶುವ್ರೊ ತಮ್ಮನ್ನು ರಕ್ಷಿಸಿದ್ದಾಗಿ ಸಂಚಿತಾ ಹೇಳಿದ್ದಾಳೆ.

ತಂದೆ ಸತ್ತು 10 ವರ್ಷಗಳೇ ಆಗಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಆಟೋ ರಿಕ್ಷಾಕ್ಕೂ ದುಡ್ಡು ಕೊಡಲಿಕೆ ಆಗಿರಲಿಲ್ಲ. ಶುವ್ರೊ ಬೈಸಿಕಲ್ ನಲ್ಲಿಯೇ ತನನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು. ಈಗ ಬಲಗಣ್ಣು ಕಾಣುವುದಿಲ್ಲ. ಆದರೆ, ಶುವ್ರೊನೇ ನನ್ನ ಬಲಗಣ್ಣು ಎನ್ನುತ್ತಾರೆ ಸಂಚಿತಾ.

ಆಸಿಡ್ ದಾಳಿಯಿಂದ ಸಂಚಿತಾ ಕಿರುಚಾಟವನ್ನು ಕೇಳಿ ಆಕೆಯ ಬಳಿಗೆ ತೆರಳಿದೆ. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗಿ ಹೇಳುವ ಶುವ್ರೊ  ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಹೋರಾಟ ನಡೆಸುತ್ತಿದ್ದಾನೆ.

ಆರಂಭದಲ್ಲಿ ಆಕೆಯನ್ನು ಮದುವೆಯಾಗಲು ನನ್ನ ಕುಟುಂಬ ಹಿಂಜರಿಯುತಿತ್ತು. ಕೆಲ ದಿನಗಳ ಹಿಂದೆ ಆಕೆಯ ತಾಯಿ ಕೂಡಾ ಮೃತಪಟ್ಟರು. ನಂತರ ಆಕೆಯನ್ನು ಮದುವೆಯಾಗುವ ನನ್ನ ನಿರ್ಧಾರವನ್ನು ಕುಟುಂಬ ಒಪ್ಪಿಕೊಂಡಿದೆ ಎಂದು ತಿಳಿಸಿದ ಶುವ್ರೊ, ಆಕೆಗೆ ನ್ಯಾಯ ಒದಗಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com