ಸಹಜ ಸ್ಥಿತಿಯತ್ತ ಮರಳುತ್ತಿರುವ ಈಶಾನ್ಯ ದೆಹಲಿ: ಶಾಂತಿ,ಸೌಹಾರ್ದಯುತ ಬದುಕಿನತ್ತ ಜನರ ಚಿತ್ತ!

ಕಳೆದ ಮೂರು ದಿನಗಳಿಂದ ಹಿಂಸಾಚಾರದಿಂದ ನಲುಗಿದ್ದ ರಾಷ್ಟ್ ರಾಜಧಾನಿ ನವದೆಹಲಿ ಸಹಜ ಸ್ಥಿತಿಯತ್ತ ಮರಳಿದೆ. ಈಶಾನ್ಯ ದೆಹಲಿಯ ವಿವಿಧ ಕಡೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನರು ಸಾವನ್ನಪ್ಪಿದ್ದು,  ಪೊಲೀಸರು ಸೇರಿದಂತೆ ಸುಮಾರು 200 ಮಂದಿ ಗಾಯಗೊಂಡಿದ್ದಾರೆ.
ಮುಸ್ಲಿಂ ಮಹಿಳೆಯೊಬ್ಬರು ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವುದು
ಮುಸ್ಲಿಂ ಮಹಿಳೆಯೊಬ್ಬರು ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವುದು
Updated on

ನವದೆಹಲಿ: ಕಳೆದ ಮೂರು ದಿನಗಳಿಂದ ಹಿಂಸಾಚಾರದಿಂದ ನಲುಗಿದ್ದ ರಾಷ್ಟ್ ರಾಜಧಾನಿ ನವದೆಹಲಿ ಸಹಜ ಸ್ಥಿತಿಯತ್ತ ಮರಳಿದೆ. ಈಶಾನ್ಯ ದೆಹಲಿಯ ವಿವಿಧ ಕಡೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನರು ಸಾವನ್ನಪ್ಪಿದ್ದು,  ಪೊಲೀಸರು ಸೇರಿದಂತೆ ಸುಮಾರು 200 ಮಂದಿ ಗಾಯಗೊಂಡಿದ್ದಾರೆ.

ಶಾಂತಿ ಹಾಗೂ ಸೌಹಾರ್ದತೆ ಮೂಡಬೇಕಿದೆ  ಆದರೆ, ಘರ್ಷಣೆ ವೇಳೆಯಲ್ಲಿ ಪೊಲೀಸರು ನಿಷ್ಕ್ರೀಯತೆ ಬಗ್ಗೆ ಹಿಂಸಾಚಾರ ಪೀಡಿತ ಪ್ರದೇಶದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಶಾನ್ಯ ದೆಹಲಿಯ ಭಾಜನ್ ಪುರ, ಕುರೆಜಿ ಖಾಸ್, ಚಾಂದ್ ಬಾಗ್, ಮೊಂಗಾ ನಗರ್ ಮತ್ತು ಕಾರವಾಲ್ ನಗರಗಳಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅಂಗಡಿ ಮುಂಗಟ್ಟುಗಳು ತೆರಿದಿವೆ. ಅನೇಕ ಅಂಗಡಿಗಳು ಕಳೆದ ರಾತ್ರಿಯವರೆಗೂ ತೆರೆದಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಶಾಂತಿ ಮತ್ತು ಸೌಹಾರ್ದತೆ ಬಗ್ಗೆ ಹಲವು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಹೇಳಿದ್ದಾರೆ. 

ಹಿಂಸಾಚಾರದಿಂದ ನಮ್ಮ ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು. ಅಂತಹ ಸಂದರ್ಭದಲ್ಲಿ ನೆರವು ನೀಡಿದ ನೆರೆಹೊರೆಯವರಿಗೆ ಧನ್ಯವಾದ ಹೇಳುವುದಾಗಿ ಭಾಜನಪುರದ ಸಹನಾ ಹೇಳುತ್ತಾರೆ. ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಈವರೆಗೂ ಸುರಕ್ಷಿತವಾಗಿರುವುದಾಗಿ ಸಬಾನಾ ಹೇಳುತ್ತಾರೆ. 

ಎಲ್ಲರೂ ಜೊತೆಯಾಗಿ ಸೌಹಾರ್ದತೆಯಿಂದ ಬದುಕು ಸಾಗಿಸಬೇಕಾಗಿದೆ. ನೆರೆಹೊರೆಯವೊಂದಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಹಿಂಸಾಚಾರಕ್ಕೆ ಕಾರಣರಾದವರನ್ನು ಪೊಲೀಸರು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೈನಾಬ್ ಹೇಳಿದರು. 

ಚಾಂದ್ ಬಾಗ್ ಪ್ರದೇಶದ ಕೌನ್ಸಿಲರ್ ತಹೀರ್ ಹುಸೇನ್ ಮನೆ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಡಜನ್ ವಾಹನಗಳಿಗೆ ಬೆಂಕಿ ಹಚ್ಚಿರುವ ದೃಶ್ಯ ಕಂಡುಬಂದಿತ್ತು. ಬಾಜನ್ ಪುರ ದಿಂದ ಕಾರವಾಲ್ ನಗರದವರೆಗೂ  ಕಲ್ಲು, ಗಾಜುಗಳು, ಇಟ್ಟಿಗೆಗಳು, ಬೆಂಕಿ ಹಚ್ಚಿದ ವಾಹನಗಳು ಕಂಡುಬಂದವು. 

ಪೌರತ್ವ ತಿದ್ದುಪಡಿ ಕಾಯ್ದೆ ಪರವಾದ ಹಾಗೂ ವಿರೋಧವಾದ ಪ್ರತಿಭಟನಾಕಾರರ ಘರ್ಷಣೆಯಿಂದಾಗಿ ಭಾನುವಾರ ಹಿಂಸಾಚಾರ ಉಂಟಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com