ಪೌರತ್ವ ಕಾಯ್ದೆ ವಿರುದ್ಧದ ವಿಧಾನಸಭೆ ನಿರ್ಣಯ ಅಕ್ರಮ, ಅಸಂವಿಧಾನಿಕ: ಕೇರಳ ರಾಜ್ಯಪಾಲ

ಪೌರತ್ವ ಕಾಯ್ದೆ ವಿರುದ್ಧದ ರಾಜ್ಯ ವಿಧಾನಸಭೆಯ ನಿರ್ಣಯ ಅಕ್ರಮ ಹಾಗೂ ಅಸಂವಿಧಾನಿಕವಾದದ್ದು ಎಂದು ಕೇರಳ ರಾಜ್ಯ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಗುರುವಾರ ಹೇಳಿದ್ದಾರೆ. 
ಕೇರಳ ರಾಜ್ಯಪಾಲ
ಕೇರಳ ರಾಜ್ಯಪಾಲ

ತಿರುವನಂತಪುರ: ಪೌರತ್ವ ಕಾಯ್ದೆ ವಿರುದ್ಧದ ರಾಜ್ಯ ವಿಧಾನಸಭೆಯ ನಿರ್ಣಯ ಅಕ್ರಮ ಹಾಗೂ ಅಸಂವಿಧಾನಿಕವಾದದ್ದು ಎಂದು ಕೇರಳ ರಾಜ್ಯ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಗುರುವಾರ ಹೇಳಿದ್ದಾರೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇರಳ ವಿಧಾನಸಭೆ ಕೆಲ ದಿನಗಳ ಹಿಂದಷ್ಟೇ ನಿರ್ಣಯ ಅಂಗೀಕರಿಸಿದ್ದು, ಈ ಹಿನ್ನೆಲೆಯಲ್ಲಿ ಹಲವು ಟೀಕೆಗಳು ವ್ಯಕ್ತವಾಗತೊಡಗಿವೆ. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯಪಾಲ, ಪೌರತ್ವ ಕಾಯ್ದೆ ವಿರುದ್ಧ ವಿಧಾನಸಭೆ ಕೈಗೊಂಡಿರುವ ನಿರ್ಣಯ ಅಕ್ರಮ ಹಾಗೂ ಅಸಂವಿಧಾನಿಕವಾದದ್ದು. ಏಕೆಂದರೆ, ಕಾಯ್ದೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಬರಲಿದ್ದು, ಇದರಲ್ಲಿ ರಾಜ್ಯ ಸರ್ಕಾರಗಳ ಹಸ್ತಕ್ಷೇಪವಿರುವುದಿಲ್ಲ ಎಂದು ಹೇಳಿದ್ದಾರೆ. 

ಇಂತಹ ನಿರ್ಣಯ ಕೈಗೊಳ್ಳುವುದರಲ್ಲಿ ರಾಜ್ಯ ಸರ್ಕಾರ ಏಕೆ ಸಮಯ ವ್ಯರ್ಥ ಮಾಡುತ್ತಿದೆ? ಪ್ರಸ್ತುತ ಕೇರಳ ಸರ್ಕಾರ ಕೈಗೊಂಡಿರುವ ನಿರ್ಣ ಅಸಂವಿಧಾನಿಕವಾದದ್ದು ಎಂದು ತಿಳಿಸಿದ್ದಾರೆ. 

ಪೌರತ್ವ ಕಾಯ್ದೆ ಕೇರಳ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯದಲ್ಲಿ ಅಕ್ರಮ ವಲಸಿಗರು ನೆಲೆಯೂರಿದ್ದಾರೆ. ಶಾಸನ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ವಿಧಾನಸಭೆಯ ನಿರ್ಣಯ ಕಾನೂನು ಸಿಂಧುತ್ವವನ್ನು ಪಡೆದಿಲ್ಲ ಎಂದಿದ್ದಾರೆ. 

ರಾಜ್ಯ ಸರ್ಕಾರದ ಪರವಾಗಿ ಕೆಲ ಶಿಫಾರಸ್ಸು ಮಾಡಿರುವುದಾಗಿ ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಕೇಂದ್ರ ಜಾರಿಗೆ ತಂದಿರುವ ಕಾಯ್ದೆಗೆ ಸಹಕಾರ ನೀಡದಂತೆಯೂ ತಿಳಿಸಿದೆ. ಶಿಫಾರಸ್ಸು ಸಂಪೂರ್ಣವಾಗಿ ಅಕ್ರಮ ಹಾಗೂ ಅಪರಾಧದಿಂದ ಕೂಡಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com