ಮೋದಿ ಸರ್ಕಾರದೊಂದಿಗೆ ಮಾತುಕತೆ: 8 ಪಿಡಿಪಿ ಮುಖಂಡರ ಉಚ್ಚಾಟನೆ

ಕಾಶ್ಮೀರಿಗಳ ಇಚ್ಛೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಪಿಡಿಪಿಯ ಎಂಟು ನಾಯಕರನ್ನು ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿಯವರ ಗುರುವಾರ ಉಚ್ಚಾಟನೆಗೊಳಿಸಿದ್ದಾರೆ.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಶ್ರೀನಗರ: ಕಾಶ್ಮೀರಿಗಳ ಇಚ್ಛೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಪಿಡಿಪಿಯ ಎಂಟು ನಾಯಕರನ್ನು ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿಯವರ ಗುರುವಾರ ಉಚ್ಚಾಟನೆಗೊಳಿಸಿದ್ದಾರೆ.

ಜನರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ಪಿಡಿಪಿ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮುಫ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಡಿಪಿ ಮುಖಂಡರಾದ ದಿಲಾವರ್ ಮಿರ್, ರಫಿಕ್ ಅಹಮ್ಮದ್ ಮಿರ್, ಜಫರ್ ಇಖ್ಬಾಲ್, ಅಬ್ದುಲ್ ಮಜೀದ್ ಪಡ್ರೂ, ರಾಜಾ ಮಂಜೂರ್ ಖಾನ್, ಜಾವಿದ್ ಹುಸ್ಸೇನ್ ಬೇಗ್, ಖಮರ್ ಹುಸ್ಸೇನ್ ಮತ್ತು ಅಬ್ದುಲ್ ರಹಿಮ್ ರಥೆರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದ 15 ರಾಷ್ಟ್ರಗಳ ರಾಜತಾಂತ್ರಿಕ ಪ್ರತಿನಿಧಿಗಳನ್ನು ಈ ಉಚ್ಚಾಟಿತ ನಾಯಕರು ಭೇಟಿಯಾಗಿದ್ದರು. ಅಲ್ಲದೆ ಕಳೆದ ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಜೆಸಿ ಮುರ್ಮು ಅವರನ್ನು ಭೇಟಿಯಾಗಿದ್ದ ನಿಯೋಗದಲ್ಲಿ ಇವರು ಸಹ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com