ಜೆಎನ್ ಯು ಹಿಂಸಾಚಾರ: ಡೇಟಾ ಸಂರಕ್ಷಿಸುವ ಬಗ್ಗೆ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದ ಕೋರ್ಟ್ 

ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಡೇಟಾ ಸಂರಕ್ಷಣೆ ಕುರಿತು ದೆಹಲಿ ಹೈಕೋರ್ಟ್ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ. 
ಜೆಎನ್ ಯು ಹಿಂಸಾಚಾರ: ಡೇಟಾ ಸಂರಕ್ಷಿಸುವ ಬಗ್ಗೆ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ ಕೋರ್ಟ್
ಜೆಎನ್ ಯು ಹಿಂಸಾಚಾರ: ಡೇಟಾ ಸಂರಕ್ಷಿಸುವ ಬಗ್ಗೆ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ ಕೋರ್ಟ್

ನವದೆಹಲಿ: ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಡೇಟಾ ಸಂರಕ್ಷಣೆ ಕುರಿತು ದೆಹಲಿ ಹೈಕೋರ್ಟ್ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ. 

ಜ.05 ರಂದು ನಡೆದಿದ್ದ ಹಿಂಸಾಚಾರದ ಕುರಿತ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕೆಂದು ವಿಶ್ವವಿದ್ಯಾನಿಲಯದ  ಪ್ರೊಫೆಸರ್ ಗಳು ದೆಹಲಿ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿರುವ ಕೋರ್ಟ್ ಪ್ರತಿಕ್ರಿಯೆ ಕೇಳಿದೆ. 

ಇದೇ ವೇಳೇ ದೆಹಲಿ ಪೊಲೀಸರು ಕೋರ್ಟ್ ಗೆ ಮಾಹಿತಿ ನೀಡಿದ್ದು, ಜೆಎನ್ ಯು ಆಡಳಿತ ಮಂಡಳಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿ ಹಸ್ತಾಂತರಿಸಲು ಕೇಳಿರುವುದಾಗಿ ಹೇಳಿದೆ. 

ಇನ್ನು ದೆಹಲಿ ಸರ್ಕಾರದ ಸ್ಟ್ಯಾಂಡಿಂಗ್ ಕೌನ್ಸಿಲ್ ರಾಹುಲ್ ಮೆಹ್ರಾ ಪೊಲೀಸರಿಗೆ ವಿವಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕೋರ್ಟ್ ಗೆ ಹೇಳಿದ್ದಾರೆ. ಈ ಮಾಹಿತಿಗಳನ್ನು ಪಡೆದ ನ್ಯಾಯಾಧೀಶ ಬ್ರಿಜೇಶ್ ಸೇಥಿ ವಿಚಾರಣೆಯನ್ನು ಜ.14 ಕ್ಕೆ ಮುಂದೂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com