ಹಿಮಪಾತದ ನಡುವೆಯುೂ ಸ್ಟ್ರೆಚರಲ್ಲಿ ಗರ್ಭಿಣಿ ಮಲಗಿಸಿ 4 ತಾಸು ಹೊತ್ತೊಯ್ದು ರಕ್ಷಣೆ ಮಾಡಿದ ಸೇನಾಪಡೆ!

ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತಗಳು ಸಂಭವಿಸುತ್ತಿದ್ದು, ಹಿಮಪಾತದ ನಡುವೆಯೂ ಪ್ರಾಣದ ಹಂಗು ತೊರೆದು ತುಂಬು ಗರ್ಭಿಣಿಯೊಬ್ಬಳನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮೂಲಕ ಸೇನಾ ಯೋಧರು ಮಾನವೀಯತೆ ಮೆರೆದಿದ್ದಾರೆ. 
ಹಿಮಪಾತದ ನಡುವೆಯುೂ ಸ್ಟ್ರೆಚರಲ್ಲಿ ಗರ್ಭಿಣಿ ಮಲಗಿಸಿ 4 ತಾಸು ಹೊತ್ತೊಯ್ದು ರಕ್ಷಣೆ ಮಾಡಿದ ಸೇನಾಪಡೆ!
ಹಿಮಪಾತದ ನಡುವೆಯುೂ ಸ್ಟ್ರೆಚರಲ್ಲಿ ಗರ್ಭಿಣಿ ಮಲಗಿಸಿ 4 ತಾಸು ಹೊತ್ತೊಯ್ದು ರಕ್ಷಣೆ ಮಾಡಿದ ಸೇನಾಪಡೆ!

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತಗಳು ಸಂಭವಿಸುತ್ತಿದ್ದು, ಹಿಮಪಾತದ ನಡುವೆಯೂ ಪ್ರಾಣದ ಹಂಗು ತೊರೆದು ತುಂಬು ಗರ್ಭಿಣಿಯೊಬ್ಬಳನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮೂಲಕ ಸೇನಾ ಯೋಧರು ಮಾನವೀಯತೆ ಮೆರೆದಿದ್ದಾರೆ. 

ಭಾರತೀಯ ಸೇನೆಯ ಚಿನಾರ್ ಕ್ಯಾಪ್ಸ್ ಟ್ವಿಟರ್ ನಲ್ಲಿ ಈ ಘಟನೆಯ ವಿಡಿಯೋವನ್ನು ಹಂಚಿಕೊಡಿದ್ದು, ಇದೀಗ ಯೋಧರ ಕಾರ್ಯಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗತೊಡಗಿದೆ. 

ಪ್ರಧಾನಿ ಮೋದಿ ಕೂಡ ಸೇನೆಯ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಬುಧವಾರ ಉಂಟಾದ ಹಿಮಪಾತದಿಂದಾಗಿ ಮಗುವಿನ ನಿರೀಕ್ಷೆಯಲ್ಲಿದ್ದ ಶಮಿಮಾ ಎಂಬ ಮಹಿಳೆಯನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾದ ಸಂದರ್ಭ ಎದುರಾಗಿತ್ತು. 

ಈ ವೇಳೆ ಮಹಿಳೆಯ ಸಹಾಯಕ್ಕೆ ಧಾವಿಸಿದ 100 ಸೇನಾ ಸಿಬ್ಬಂದಿ ಹಾಗೂ 30 ನಾಗರೀಕರು ಸ್ಟ್ರೆಚರ್ ನಲ್ಲಿ ಮಹಿಳೆಯನ್ನು ನಾಲ್ಕು ಗಂಟೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ  ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com