ಕಾಶ್ಮೀರ ವಿಷಯದಲ್ಲಿ ಭಾರತದ ನೀತಿ ಬಗ್ಗೆ ರಷ್ಯಾ ಎಂದಿಗೂ ಸಂದೇಹ ಪಡುವುದಿಲ್ಲ-ರಷ್ಯಾ ರಾಯಭಾರಿ

ಕಾಶ್ಮೀರ ಕುರಿತ ವಿಷಯದಲ್ಲಿ ಭಾರತದ ನೀತಿಯ ಬಗ್ಗೆ ತಾನು ಎಂದೂ ಸಂದೇಹ ಪಡುವುದಿಲ್ಲ ಎಂದು ರಷ್ಯಾ ಶುಕ್ರವಾರ ಹೇಳುವುದರೊಂದಿಗೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸುವುದಕ್ಕೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಹೊಸ ಕ್ರಮಗಳಿಗೆ ಮಹತ್ವದ ರಾಜತಾಂತ್ರಿಕ ಜಯ ಸಿಕ್ಕಿದೆ. 
ಕಾಶ್ಮೀರ ವಿಷಯದಲ್ಲಿ ಭಾರತದ ನೀತಿ ಬಗ್ಗೆ ರಷ್ಯಾ ಎಂದಿಗೂ ಸಂದೇಹ ಪಡುವುದಿಲ್ಲ-ರಷ್ಯಾ ರಾಯಭಾರಿ
ಕಾಶ್ಮೀರ ವಿಷಯದಲ್ಲಿ ಭಾರತದ ನೀತಿ ಬಗ್ಗೆ ರಷ್ಯಾ ಎಂದಿಗೂ ಸಂದೇಹ ಪಡುವುದಿಲ್ಲ-ರಷ್ಯಾ ರಾಯಭಾರಿ

ನವದೆಹಲಿ: ಕಾಶ್ಮೀರ ಕುರಿತ ವಿಷಯದಲ್ಲಿ ಭಾರತದ ನೀತಿಯ ಬಗ್ಗೆ ತಾನು ಎಂದೂ ಸಂದೇಹ ಪಡುವುದಿಲ್ಲ ಎಂದು ರಷ್ಯಾ ಶುಕ್ರವಾರ ಹೇಳುವುದರೊಂದಿಗೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸುವುದಕ್ಕೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಹೊಸ ಕ್ರಮಗಳಿಗೆ ಮಹತ್ವದ ರಾಜತಾಂತ್ರಿಕ ಜಯ ಸಿಕ್ಕಿದೆ. 

‘ಕಾಶ್ಮೀರ ಕುರಿತು ಭಾರತದ ನೀತಿಯ ಬಗ್ಗೆ ಸಂದೇಹ ಪಡುವವರು, ಭಾರತದ ನೀತಿಗಳ ಬಗ್ಗೆ ಸಂದೇಹ ಪಡುವವರು ತಾವಾಗಿಯೇ ಅಲ್ಲಿಗೆ ಹೋಗಿ ಅಲ್ಲಿನ ಸ್ಥಿತಿ ನೋಡಬೇಕು. ಆದರೆ, ನಾವು ಎಂದೂ ಸಂದೇಹ ಪಡುವುದಿಲ್ಲ.’ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೊಲೆ ಕುಡಶೆವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದ್ದಾರೆ. 

ಕಾಶ್ಮೀರ ವಿಷಯ ಭಾರತದ ಆಂತರಿಕ ವಿಷಯವಾಗಿದೆ. ಅಲ್ಲದೆ, ರಷ್ಯಾ ಪ್ರದೇಶಕ್ಕೂ ಅದು ಒಳಪಡುವುದಿಲ್ಲ. ಆದ್ದರಿಂದ ಭಾರತದ ಆಂತರಿಕ ವಿಷಯಗಳ ಬಗ್ಗೆ ಸಂದೇಹ ಪಡುವುದಿಲ್ಲ ಎಂದು ಅವರು ಹೇಳಿದ್ದಾರೆ. ‘2020ನೇ ವರ್ಷ ಭಾರತ-ರಷ್ಯಾ ನಡುವಿನ ಹೊಸ ಒಪ್ಪಂದಗಳ ಮತ್ತು ಯೋಜನೆಗಳ ಅನುಷ್ಠಾನದ ವರ್ಷವಾಗಲಿದೆ. ರಷ್ಯಾ ಮತ್ತು ಭಾರತ ನಡುವಿನ ಕಾರ್ಯತಂತ್ರ ಪಾಲುದಾರಿಕೆಯ 20ನೇ ವರ್ಷವೂ ಇದಾಗಿದೆ. ಭಾರತ ಪ್ರಧಾನಿ ನರೇಂದ್ರಮೋದಿ ಹೇಳಿರುವಂತೆ, ಈ ವರ್ಷ ರಷ್ಯಾ-ಭಾರತ ನಡುವಿನ ಒಪ್ಪಂದಗಳು ಮತ್ತು ಯೋಜನೆಗಳ ಅನುಷ್ಠಾನ ವರ್ಷವಾಗಲಿದೆ.’ ಎಂದು ಕುಡಶೆವ್ ಹೇಳಿದ್ದಾರೆ. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕಾಶ್ಮೀರಕ್ಕೆ ತಾವು ಏಕೆ ತೆರಳಬೇಕು ಎಂದು ತಮಗೆ ಅನಿಸುತ್ತಿಲ್ಲ. ಜಮ್ಮು-ಕಾಶ್ಮೀರ ಕುರಿತು ಹೇಳುವುದಾದರೆ ತೀರ್ಮಾನಗಳು ಭಾರತದ ಸಂವಿಧಾನದಂತೆ ಆಂತರಿಕ ವಿಷಯವಾಗಿವೆ.’ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಇದುವರೆಗೆ ರಷ್ಯಾ ರಕ್ಷಣಾ ಪಡೆಗಳಿಗೆ ಮಾತ್ರ ಲಭ್ಯವಿದ್ದ ಐದು ಎಸ್-400 ವೈಮಾನಿಕ ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು 2025ರ ವೇಳೆಗೆ ಭಾರತಕ್ಕೆ ಪೂರೈಸಲಾಗುವುದು ಎಂದು ರಷ್ಯಾ ಹೇಳಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ಮೋದಿ ಅವರು ಮೇ ತಿಂಗಳಲ್ಲಿ ರಷ್ಯಾಗೆ ಭೇಟಿ ನೀಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com