ಆಘಾದಿ ಸರ್ಕಾರದ ಸಚಿವರು ಅರ್ಹತೆಯಿಂದ ಸ್ಥಾನ ಪಡೆದಿದ್ದಾರೆ - ಪವಾರ್ 

ಶಿವಸೇನಾ ನಾಯಕತ್ವದ ಆಘಾದಿ ಮೈತ್ರಿ ಸರ್ಕಾರದಲ್ಲಿನ ಅನೇಕ ಸಚಿವರು ಅರ್ಹತೆ ಆಧಾರದ ಮೇಲೆ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಶರದ್ ಪವಾರ್
ಶರದ್ ಪವಾರ್
Updated on: 

ಮುಂಬೈ: ಶಿವಸೇನಾ ನಾಯಕತ್ವದ ಆಘಾದಿ ಮೈತ್ರಿ ಸರ್ಕಾರದಲ್ಲಿನ ಅನೇಕ ಸಚಿವರು ಅರ್ಹತೆ ಆಧಾರದ ಮೇಲೆ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಥಾಣೆ ಜಿಲ್ಲೆಯ ಕಾಲ್ವಾದಲ್ಲಿ ನಡೆದ ಕ್ಯಾಬಿನೆಟ್ ಸಚಿವ  ಜಿತೇಂದ್ರ ಅವಾದ್  ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಪವಾರ್,  ರಾಜಕೀಯ ಕುಟುಂಬದ  ಹಿನ್ನೆಲೆ ಹೊಂದಿಲ್ಲದವರು ಕೂಡಾ ಅರ್ಹತೆ ಆಧಾರದ ಮೇಲೆ ಸಚಿವರಾಗಿದ್ದಾರೆ ಎಂದರು.

ಉದ್ದವ್ ಠಾಕ್ರೆ ನೇತೃತ್ವದ ಸೇನಾ-ಎನ್ ಪಿಸಿ- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ 43 ಸಚಿವರ ಪೈಕಿಯಲ್ಲಿ 19 ಸಚಿವರು ರಾಜಕೀಯ ಹಿನ್ನೆಲೆವುಳ್ಳವರಾಗಿದ್ದಾರೆ.

ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತ ರಾವ್ ಚೌಹ್ಹಾಣ್ ಅವರನ್ನು ಸ್ಮರಿಸಿದ ಪವಾರ್, ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಯಾವಾಗಲೂ ತಮ್ಮನ್ನು ಬೆಂಬಲಿಸುತ್ತಿದ್ದರು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com