ಕೋವಿಡ್-19 ಸೋಂಕಿನಿಂದ 1984 ಸಿಖ್ ವಿರೋಧಿ ಹಿಂಸಾಚಾರದ ಆರೋಪಿ ಸಾವು

1984ರ ಸಿಖ್ ವಿರೋಧಿ ಹಿಂಸಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕರೊಬ್ಬರು ಕೋವಿಡ್-19 ಸೋಂಕಿನಿಂದ ರಾಷ್ಟ್ರ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ಇಂದು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:1984ರ ಸಿಖ್ ವಿರೋಧಿ ಹಿಂಸಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕರೊಬ್ಬರು ಕೋವಿಡ್-19 ಸೋಂಕಿನಿಂದ ರಾಷ್ಟ್ರ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ಇಂದು ಸಾವನ್ನಪ್ಪಿದ್ದಾರೆ.

ಮಾಂಡೋಲಿ ಜೈಲಿನಲ್ಲಿದ್ದ ಎರಡನೇ ಖೈದಿ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಪಾಲಂ ಕ್ಷೇತ್ರದ ಮಾಜಿ ಶಾಸಕ ಮಹೇಂದರ್ ಯಾದವ್ (70) ಮೃತಪಟ್ಟವರಾಗಿದ್ದಾರೆ.

10 ವರ್ಷಗಳ ಜೈಲುಶಿಕ್ಷೆಗೊಳಗಾಗಿದ್ದ ಅವರನ್ನು ಮಾಂಡೋಲಿ ಕಾರಾಗೃಹದ ಕೊಠಡಿ ಸಂಖ್ಯೆ 14ರಲ್ಲಿ  ಇಡಲಾಗಿತ್ತು. ಜೂನ್ 26ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಇದೇ ಸಂಖ್ಯೆಯ ಕೊಠಡಿಯಲ್ಲಿದ್ದ ಮತ್ತೋರ್ವ ಆರೋಪಿ ಕಾನ್ವರ್ ಸಿಂಗ್  ಕಳೆದ ತಿಂಗಳು ಕೊರೋನಾದಿಂದ ಮೃತಪಟ್ಟಿದ್ದರು.

ಉಸಿರಾಟ ಹಾಗೂ ಹೃದಯ ಸಂಬಂಧಿತ ತೊಂದರೆಯಾಗುತ್ತಿರುವುದಾಗಿ ಯಾದವ್ ಹೇಳಿದ್ದರಿಂದ ಜೂನ್ 26 ರಂದು ಡಿಡಿಯು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಎಲ್ ಎನ್ ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಕಾರಾಗೃಹದ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಹೇಳಿದ್ದಾರೆ.

ನಂತರ ಕುಟುಂಬಸ್ಥರ ಮನವಿ ಮೇರೆಗೆ ಪೊಲೀಸ್ ಭದ್ರತೆಯಲ್ಲಿ ದ್ವಾರಕದ ಖಾಸಗಿ ಆಸ್ಪತ್ರೆಯೊಂದಕ್ಕೆ ಜೂನ್ 30ರಂದು ರವಾನಿಸಲಾಯಿತು. ಜುಲೈ 4ರಂದು ಮಹೇಂದರ್ ಯಾದವ್ ಮೃತಪಟ್ಟಿರುವುದಾಗಿ ಆಕಾಶ್ ಆಸ್ಪತ್ರೆಯಿಂದ ಮಾಹಿತಿ ದೊರೆಯಿತು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com