ಭಾರತದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 425 ಮಂದಿ ಸಾವು, 24,248 ಹೊಸ ಪ್ರಕರಣ!
ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 24 ಸಾವಿರದ 248 ಹೊಸ ಪ್ರಕರಣಗಳು ವರದಿಯಾಗಿದ್ದು 425 ಸಾವು ಸಂಭವಿಸಿದೆ.
6,97,413 ಪಾಸಿಟಿವ್ ಕೇಸುಗಳಿದ್ದು ಅವುಗಳಲ್ಲಿ 2,53,287 ಸಕ್ರಿಯ ಕೇಸುಗಳಾಗಿವೆ, 4,24,433 ಗುಣಮುಖರಾದ/ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ/ಬೇರೆಡೆಗೆ ಹೋದ ಪ್ರಕರಣಗಳು ಮತ್ತು 19 ಸಾವಿರದ 693 ಸಾವು ಇಲ್ಲಿಯವರೆಗೆ ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ಕೇಸಿನಲ್ಲಿ ರಷ್ಯಾವನ್ನು ಹಿಂದಿಕ್ಕಿರುವ ಭಾರತ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಇದುವರೆಗೆ ಕೊರೋನಾ ಸೋಂಕಿತರ ಸಂಖ್ಯೆ 6.90 ಲಕ್ಷ ಗಡಿ ದಾಟಿದೆ ಎಂದು ವರ್ಲ್ಡೊಮೀಟರ್ ತಿಳಿಸಿದೆ.ಸದ್ಯ ಕೊರೋನಾ ಸೋಂಕಿತರ ಪ್ರಕರಣಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಮಾತ್ರ ಮುಂದಿವೆ.
ನಿನ್ನೆಯವರೆಗೆ ಭಾರತ ದೇಶದಲ್ಲಿ 99 ಲಕ್ಷದ 69 ಸಾವಿರದ 662 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ರಷ್ಯಾ ದೇಶದಲ್ಲಿ ಇಲ್ಲಿಯವರೆಗೆ 6 ಲಕ್ಷದ 81 ಸಾವಿರದ 251 ಮಂದಿ ಸೋಂಕಿತರಿದ್ದು ಬ್ರೆಜಿಲ್ ನಲ್ಲಿ 15 ಲಕ್ಷದ 78 ಸಾವಿರದ 376 ಮತ್ತು ಅಮೆರಿಕದಲ್ಲಿ 29 ಲಕ್ಷದ 54 ಸಾವಿರದ 999 ಕೊರೋನಾ ಸೋಂಕಿತ ಪ್ರಕರಣಗಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ