ದೆಹಲಿ ಸಿಎಂ ಕೇಜ್ರಿವಾಲ್
ದೆಹಲಿ ಸಿಎಂ ಕೇಜ್ರಿವಾಲ್

ಕೋವಿಡ್-19: ಪ್ಲಾಸ್ಮಾ ದಾನ ಪ್ರೋತ್ಸಾಹಿಸಲು ಫ್ಲೆಕ್ಸ್ ಬೋರ್ಡ್'ಗಳನ್ನು ಹಾಕಿ; ಆಸ್ಪತ್ರೆಗಳಿಗೆ ದೆಹಲಿ ಸರ್ಕಾರ ಸೂಚನೆ

ಕೊರೋನಾದಿಂದ ಗುಣಮುಖರಾದ ಜನರು ಪ್ಲಾಸ್ಮಾ ದಾನ ಮಾಡುವಂತೆ ಪ್ರೋತ್ಸಾಹಿಸಲು  ಆಸ್ಪತ್ರೆಗಳಲ್ಲಿ ಫ್ಲೆಕ್ಸ್ ಬೋರ್ಡ್ ಗಳನ್ನು ಹಾಕಿ ಎಂದು ಆಸ್ಪತ್ರೆಗಳಿಗೆ ದೆಹಲಿ ಸರ್ಕಾರ ಮಂಗಳವಾರ ಸೂಚನೆ ನೀಡಿದೆ. 

ನವದೆಹಲಿ: ಕೊರೋನಾದಿಂದ ಗುಣಮುಖರಾದ ಜನರು ಪ್ಲಾಸ್ಮಾ ದಾನ ಮಾಡುವಂತೆ ಪ್ರೋತ್ಸಾಹಿಸಲು  ಆಸ್ಪತ್ರೆಗಳಲ್ಲಿ ಫ್ಲೆಕ್ಸ್ ಬೋರ್ಡ್ ಗಳನ್ನು ಹಾಕಿ ಎಂದು ಆಸ್ಪತ್ರೆಗಳಿಗೆ ದೆಹಲಿ ಸರ್ಕಾರ ಮಂಗಳವಾರ ಸೂಚನೆ ನೀಡಿದೆ. 

ಕೊರೋನಾ ವೈರಸ್ ನಿಂದ ಚೇತರಿಸಿಕೊಂಡ ಜನರು ಇತರೆ ಸೋಂಕಿತರಿಗೆ ಸಹಾಯ ಮಾಡಲು ಪ್ಲಾಸ್ಮಾ ದಾನ ಮಾಡುವಂತೆ ಪ್ರೋತ್ಸಾಹಿಸಲು ರಾಷ್ಟ್ರರಾಜಧಾನಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಫ್ಲೆಕ್ಸ್ ಬೋರ್ಡ್ ಗಳನ್ನು ಹಾಕಬೇಕು. ಆಸ್ಪತ್ರೆಗಳ ಮುಖ್ಯದ್ವಾರದಲ್ಲಿಯೇ ಬೋರ್ಡ್ ಗಳನ್ನು ಹಾಕುವಂತೆ ಆಸ್ಪತ್ರೆಗಳಿಗೆ ದೆಹಲಿ ಸರ್ಕಾರ ಆದೇಶಿಸಿದೆ ಎಂದು ತಿಳಿದುಬಂದಿದೆ. 

ದೆಹಲಿಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1,00,823ಕ್ಕೆ ಏರಿಕೆಯಾಗಿದ್ದು, 3,115 ಮಂದಿ ಈ ವರೆಗೂ ಮಹಾಮಾರಿಗೆ ಬಲಿಯಾಗಿದ್ದಾರೆ. 1,00,823 ಮಂದಿ ಸೋಂಕಿತರ ಪೈಕಿ 72,088 ಸೋಂಕಿನಿಂದ ಗುಣಮುಖರಾಗಿದ್ದಾರೆಂದು ವರದಿಗಳು ತಿಳಿಸಿವೆ. 

Related Stories

No stories found.

Advertisement

X
Kannada Prabha
www.kannadaprabha.com