ಮುಂಬೈ ನಡುರಸ್ತೆಯಲ್ಲಿ ಕುಟುಂಬ ಕಲಹ: ಗಂಡನ ಕಾರು ನಿಲ್ಲಿಸಿದ ಮಹಿಳೆ, ಸಂಚಾರ ವ್ಯತ್ಯಯ, ವಿಡಿಯೋ

ಕುಟುಂಬ ಕಲಹ ಬೀದಿಗೆ ಬಂದು ಮಹಿಳೆಯೊಬ್ಬರು ತಮ್ಮ ಪತಿಯ ಕಾರನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಬೋನೆಟ್ ಪರಿಣಾಮ ಸಂಚಾರ ವ್ಯತ್ಯಯ ಉಂಟಾಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.
ನಡುರಸ್ತೆಯಲ್ಲಿ ಕುಟುಂಬ ಕಲಹ ಗಂಡನ ಕಾರು ನಿಲ್ಲಿಸಿದ ಮಹಿಳೆ, ಸಂಚಾರ ವ್ಯತ್ಯಯ
ನಡುರಸ್ತೆಯಲ್ಲಿ ಕುಟುಂಬ ಕಲಹ ಗಂಡನ ಕಾರು ನಿಲ್ಲಿಸಿದ ಮಹಿಳೆ, ಸಂಚಾರ ವ್ಯತ್ಯಯ
Updated on: 

ಮುಂಬೈ: ಕುಟುಂಬ ಕಲಹ ಬೀದಿಗೆ ಬಂದು ಮಹಿಳೆಯೊಬ್ಬರು ತಮ್ಮ ಪತಿಯ ಕಾರನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಅಡ್ಡ ನಿಂತು ತಡೆದ ಪರಿಣಾಮ ಸಂಚಾರ ವ್ಯತ್ಯಯ ಉಂಟಾಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.

ದಕ್ಷಿಣ ಮುಂಬೈ ನ ಜನನಿಬಿಢ, ಪೆಡರ್ ರಸ್ತೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶನಿವಾರ ಸಂಜೆ ನಡೆದ ಘಟನೆಯನ್ನು ದಾರಿಹೋಕರೊಬ್ಬರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಮಹಿಳೆಯೊಬ್ಬರು ತಮ್ಮ ಪತಿ ಬೇರೊಬ್ಬ ಮಹಿಳೆ ಜೊತೆ ಎಸ್ ಯುವಿ ಕಾರ್ ನಲ್ಲಿ ತೆರಳುತ್ತಿರುವುದನ್ನು ಕಂಡು ಆ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪೆಡರ್ ರೋ ಸಿಗ್ನಲ್ ನಲ್ಲಿ ಆ ವ್ಯಕ್ತಿಯ ಕಾರು ನಿಲ್ಲುತ್ತಿದ್ದಂತೆಯೇ ಮಹಿಳೆ ತಮ್ಮ ಕಾರಿನಿಂದ ಇಳಿದು ತಮ್ಮ ಪತ್ನಿಯ ಕಾರಿನೆಡೆಗೆ ತೆರಳಿ ಜೋರಾಗಿ ಕಿರುಚಿದ್ದಾರೆ. ಆಕ್ರೋಶಗೊಂಡ ಮಹಿಳೆ ಎಸ್ ಯುವಿಯ ಕಾರಿನ ಬಾನೆಟ್ ಮೇಲೆ ಹತ್ತಿ ಚಪ್ಪಲಿಯಿಂದ ವಿಂಡ್ ಶೀಲ್ಡ್ ನ್ನು ಹೊಡೆಯತೊಡಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲದೇ ತನ್ನ ಪತಿಯ ಜೊತೆಗಿದ್ದ ಮಹಿಳೆಯನ್ನು ಕಾರಿನಿಂದ ಕೆಳಗೆ ಇಳಿಯುವಂತೆ ಆಗ್ರಹಿಸಿ, ಪೊಲೀಸರ ಸಹಾಯಕ್ಕಾಗಿ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಪ್ರಹಸನದ ಪರಿಣಾಮ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಕೆಲ ಸಮಯದ ನಂತರ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಪೊಲೀಸರು ಇಬ್ಬರ ಕಾರುಗಳನ್ನೂ ಫುಟ್ಪಾತ್ ಬಳಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ತನ್ನ ಪತಿ ಕಾರಿನಿಂದ ಕೆಳಗಿಳಿಯುತ್ತಿದ್ದನ್ನು ಕಂಡ ಮಹಿಳೆ ಆತನೆಡೆಗೆ ಓಡಿದ್ದು, ಆತನನ್ನು ಹಿಡಿದು ಥಳಿಸಲು ಮುಂದಾಗಿದ್ದಾಳೆ. ಇಷ್ಟೆಲ್ಲಾ ನಡೆದ ಬಳಿಕ ಅವರನ್ನು ಗಾಮ್ ದೇವಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆದರೆ ಮಹಿಳೆ ತನ್ನ ಪತಿಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಪೊಲೀಸರು ದಂಡ ವಿಧಿಸಿ ವಾಪಸ್ ಕಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com