ಶತ್ರುಗಳ ಎದೆಯಲ್ಲಿ ಢವಢವ, ಭಾರತೀಯ ಸೇನಾ ಬತ್ತಳಿಕೆ ಸೇರಿದ ಧ್ರುವಾಸ್ತ್ರ, ಯಶಸ್ವಿ ಪರೀಕ್ಷೆ ವಿಡಿಯೋ!

ಭಾರತದ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಕಿತಾಪತಿ ಮಾಡುತ್ತಿದ್ದು ಇದರ ಬೆನ್ನಲ್ಲೇ ಭಾರತೀಯ ಸೇನೆಯ ಬತ್ತಳಿಕೆಗೆ ಹೊಸದೊಂದು ಅಸ್ತ್ರ ಸೇರ್ಪಡೆಗೊಂಡಿದೆ.
ಧ್ರುವಾಸ್ತ್ರ ಕ್ಷಿಪಣಿ ಪರೀಕ್ಷೆ
ಧ್ರುವಾಸ್ತ್ರ ಕ್ಷಿಪಣಿ ಪರೀಕ್ಷೆ

ನವದೆಹಲಿ: ಭಾರತದ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಕಿತಾಪತಿ ಮಾಡುತ್ತಿದ್ದು ಇದರ ಬೆನ್ನಲ್ಲೇ ಭಾರತೀಯ ಸೇನೆಯ ಬತ್ತಳಿಕೆಗೆ ಹೊಸದೊಂದು ಅಸ್ತ್ರ ಸೇರ್ಪಡೆಗೊಂಡಿದೆ.

ಮೇಕ್ ಇನ್ ಇಂಡಿಯಾ ಅಭಿಯಾನದಡಿ ಡಿಆರ್ ಡಿಒ ನಿರ್ಮಿಸಿರುವ ಆಂಟಿ ಟ್ಯಾಂಕ್ ಧ್ರುವಾಸ್ತ್ರ ಮಿಸೈಲ್ ಅನ್ನು ಒಡಿಶಾದ ಇಂಟರಿಮ್ ಟೆಸ್ಟ್ ರೇಂಜ್ ನಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. 

ಧ್ರುವಾಸ್ತ್ರ 3ನೇ ತಲೆಮಾರಿನ ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣೆ ವ್ಯವಸ್ಥೆ ಹೊಂದಿದ್ದು ಅಡ್ವಾನ್ಸಡ್ ಲೈಟ್ ಹೆಲಿಕಾಪ್ಟರ್ ನಲ್ಲಿ ಅಳವಡಿಸಲಾಗುತ್ತದೆ. 

ಈ ಧ್ರುವಾಸ್ತ್ರ ಸಾಂಪ್ರದಾಯಿಕ ರಕ್ಷಣಾ ರಕ್ಷಾಕವಚ ಯುದ್ಧ ಟ್ಯಾಂಕ್ ಗಳನ್ನು ಮಾತ್ರವಲ್ಲದೆ ಸ್ಫೋಟಕಗಳಿಂದ ರಕ್ಷಾಕವಚ ರಕ್ಷಣೆ ಹೊಂದಿರುವ ಟ್ಯಾಂಕ್ ಗಳನ್ನು ಸಹ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. 

ಡೈರೆಕ್ಟ್ ಹಾಗೂ ಟಾಪ್ ಅಟ್ಯಾಕ್ ಮೋಡ್ ನಲ್ಲಿ ಜುಲೈ 15 ಮತ್ತು 16ರಂದು ಧ್ರುವಾಸ್ತ್ರ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com