ಅಮಿತ್ ಶಾ ಕಾರ್ಯದರ್ಶಿಎಂದು ರಾಜಸ್ಥಾನ, ಹರಿಯಾಣ ಮಂತ್ರಿಗಳ ಕರೆಸಿದ್ದ ವ್ಯಕ್ತಿ ಬಂಧನ

ಕೇಂದ್ರ ಗೃಹ ಸಚಿವ ಅಮಿತ್ ಶಾ  ವೈಯಕ್ತಿಕ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದ ಹಾಗೂ   ಹರಿಯಾಣ ಮತ್ತು ರಾಜಸ್ಥಾನದ ಕಾರ್ಮಿಕ ಇಲಾಖೆ ಮಂತ್ರಿಗಳನ್ನು ಕೆಲಸಕ್ಕೆಂದು ಕರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಅಪರಾಧ ಶಾಖೆ ಪೊಲೀಸರು ಬಂಧಿಸಿದ್ದಾರೆ. 
ಅಮಿತ್ ಶಾ
ಅಮಿತ್ ಶಾ
Updated on: 

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ  ವೈಯಕ್ತಿಕ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದ ಹಾಗೂ   ಹರಿಯಾಣ ಮತ್ತು ರಾಜಸ್ಥಾನದ ಕಾರ್ಮಿಕ ಇಲಾಖೆ ಮಂತ್ರಿಗಳನ್ನು ಕೆಲಸಕ್ಕೆಂದು ಕರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಅಪರಾಧ ಶಾಖೆ ಪೊಲೀಸರು ಬಂಧಿಸಿದ್ದಾರೆ. 

ಬಂಧಿತನನ್ನು ಸಂದೀಪ್ ಚೌಧರಿ (25) ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತೆಹ್ ಮುಂದಾವರ್  ನಿವಾಸಿ ಎಂದು ಗುರುತಿಸಲಾಗಿದೆ.

ಗೃಹ ಸಚಿವಾಲಯದ ದೂರಿನ ಆಧಾರದ ಮೇಲೆ ಅಪರಾಧ ವಿಭಾಗವು ಪ್ರಕರಣ ದಾಖಲಿಸಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಶಾ ಅವರ ವೈಯಕ್ತಿಕ ಕಾರ್ಯದರ್ಶಿಯಾಗಿ ನಟಿಸುತ್ತಿರುವ ವ್ಯಕ್ತಿಯೊಬ್ಬ ಹರಿಯಾಣ ಮತ್ತು ರಾಜಸ್ಥಾನದ  ಕಾರ್ಮಿಕ ಇಲಾಖೆ ಮಂತ್ರಿ ಗಳಿಗೆ ಕರೆ ಮಾಡಿ ಕರೆಸಿಕೊಂಡಿದ್ದನೆನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com