ಬೆಡ್ ಗಳ ಕೊರತೆ; ಪ್ರವೇಶ ನಿರಾಕರಿಸಿದ 8 ಆಸ್ಪತ್ರೆಗಳು,  13 ಗಂಟೆ ಅಲೆದಾಡಿ ಆ್ಯಂಬುಲೆನ್ಸ್ ನಲ್ಲೇ ಪ್ರಾಣಬಿಟ್ಟ ಗರ್ಭಿಣಿ ಮಹಿಳೆ

ದೇಶಾದ್ಯಂತ ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದುರಾಗಿದ್ದು, ಇದೇ ಸಮಸ್ಯೆ ಇದೀಗ ಉತ್ತರ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಲಖನೌ: ದೇಶಾದ್ಯಂತ ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದುರಾಗಿದ್ದು, ಇದೇ ಸಮಸ್ಯೆ ಇದೀಗ ಉತ್ತರ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾಗಿದೆ.

ಹೌದು.. ಗರ್ಭಧಾರಣೆ ಸಂಬಂಧಿತ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಬಯಸಿದ್ದ 8 ತಿಂಗಳ ಗರ್ಭಿಣಿ ಮಹಿಳೆಗೆ ಬೆಡ್ ಗಳ ಕೊರತೆಯ ಕಾರಣ ನೀಡಿ 8 ಆಸ್ಪತ್ರೆಗಳು ಪ್ರವೇಶ ನಿರಾಕರಿಸಿದ ಬಳಿಕ ಮಹಿಳೆ ಆ್ಯಂಬುಲೆನ್ಸ್‌ನಲ್ಲೇ ಪ್ರಾಣ ಬಿಟ್ಟ ಘಟನೆ ಉತ್ತರಪ್ರದೇಶದ ಖೋಡಾದಲ್ಲಿ ನಡೆದಿದೆ.

ನೋಯ್ಡಾ-ಗಾಝಿಯಾಬಾದ್ ಬಳಿಯ ಖೋಡಾ ಕಾಲೊನಿ ನಿವಾಸಿಯಾಗಿರುವ 30 ವರ್ಷದ ನೀಲಂ ಎಂಬ ಮಹಿಳೆ 8 ತಿಂಗಳ ಗರ್ಭಿಣಿಯಾಗಿದ್ದು ಅನಾರೋಗ್ಯದ ಹಿನ್ನೆಲೆಯಲ್ಲಿ ಇಎಸ್‌ಐ ಆಸ್ಪತ್ರೆಗೆ ತೆರಳಿದ್ದರು. ಆದರೆ ಬೆಡ್ ಕೊರತೆ ಕಾರಣ ಸ್ಥಳೀಯ ಶಿವಾಲಿಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು.  ಆದರೆ ಆದರೆ ಅಲ್ಲಿಯೂ ಬೆಡ್‌ಗಳ ಕೊರತೆಯಿದೆ ಎಂದು ಹೇಳಿ ಆಸ್ಪತ್ರೆಯವರು ದಾಖಲಿಸಿಕೊಳ್ಳಲಿಲ್ಲ. ಅಲ್ಲಿಂದ ಸೆಕ್ಟರ್ 3ರಲ್ಲಿರುವ ಆಸ್ಪತ್ರೆ, ಶಾರದಾ ಆಸ್ಪತ್ರೆ, ಜೇಪೀ ಫೋರ್ಟಿಸ್ ಆಸ್ಪತ್ರೆ ಸೇರಿದಂತೆ 8 ಆಸ್ಪತ್ರೆಗಳಿಗೆ ಗರ್ಭಿಣಿ ಮಹಿಳೆ ಅಲೆದಾಡಿದ್ದಾರೆ. ಎಲ್ಲ ಕಡೆಯೂ ಬೆಡ್‌ಗಳ ಕೊರತೆಯ ಕಾರಣ ನೀಡಿ ಯಾವ ಆಸ್ಪತ್ರೆಯವರೂ ದಾಖಲಿಸಿಕೊಳ್ಳಲಿಲ್ಲ ಎಂದು ಆಕೆಯ ಪತಿ ವಿಜೇಂದರ್ ಸಿಂಗ್ ಅಳಲು ತೋಡಿಕೊಂಡಿದ್ದಾರೆ. 

 ಅಂತಿಮವಾಗಿ, 13 ಗಂಟೆಗಳ ಅಲೆದಾಟದ ಬಳಿಕ ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯ ವಿಜ್ಞಾನ ಸಂಸ್ಥೆಗೆ ಪತ್ನಿಯನ್ನು ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾದರೂ ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಕರಣದ ಬಗ್ಗೆ ಮುಖ್ಯ ವೈದ್ಯಾಧಿಕಾರಿ ದೀಪಕ್ ಓಹ್ರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಮುನೀಂದ್ರನಾಥ್ ಉಪಾಧ್ಯಾಯ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com