
ಒಡಿಶಾ: ಎರಡು ಆಸನಗಳ ವಿಮಾನವೊಂದು ಒಡಿಶಾ ರಾಜ್ಯದ ಧೆಂಕನಲ್ ಜಿಲ್ಲೆಯ ಬಳಿ ಅಪಘಾತಕ್ಕೀಡಾಗಿ ಟ್ರೈನಿ ಪೈಲಟ್ ಹಾಗೂ ಆಕೆಗೆ ತರಬೇತಿ ನೀಡುತ್ತಿದ್ದ ಮಾರ್ಗದಶಕರೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯ ಬಿರಸಲದಲ್ಲಿರುವ ಸರ್ಕಾರಿ ವಾಯುಯಾನ ತರಬೇತಿ ಸಂಸ್ಥೆಯಲ್ಲಿ ಟಾರ್ಮ್ಯಾಕ್‌ನಲ್ಲಿ ತರಬೇತುದಾರ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಕೆ ನಾಯಕ್ ತಿಳಿಸಿದ್ದಾರೆ.
ಇಬ್ಬರನ್ನು ಕಾಮಕ್ಯನಗರ ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದ್ದು, ಅವರು ಅಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ತಾಂತ್ರಿಕ ದೋಷದಿಂದ ಈ ಅಪಘಾತ ಸಂಭವಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತರಬೇತಿ ನೀಡುತ್ತಿದ್ದ ಮಾರ್ಗದರ್ಶಕರು ಪುರುಷರಾಗಿದ್ದು, ಅವರ ಗುರುತನ್ನು ಕಂಡುಹಿಡಿಯಲಾಗುತ್ತಿದೆ ಎಂದು ಕಾಮಕ್ಯನಗರ ಠಾಣೆ ಉಸ್ತುವಾರಿ ಇನ್ಸ್ ಪೆಕ್ಟರ್ ಎ ದಾಲುವಾ ತಿಳಿಸಿದ್ದಾರೆ.
Advertisement