ಲಡಾಖ್ ಸಂಘರ್ಷದಲ್ಲಿ ಹುತಾತ್ಮರಾದ ಅಧಿಕಾರಿ ತೆಲಂಗಾಣ ಮೂಲದ ಕರ್ನಲ್ ಸಂತೋಷ್ ಬಾಬು!

ಚೀನಾ ಯೋಧರಿಂದ ಹತ್ಯೆಗೀಡಾಗಿ ಹುತಾತ್ಮರಾದ ಸೇನಾ ಅಧಿಕಾರಿಯನ್ನು ತೆಲಂಗಾಣ ಮೂಲದ ಕರ್ನಲ್ ಸಂತೋಷ್ ಬಾಬು ಎಂದು ಗುರುತಿಸಲಾಗಿದೆ.
ಹುತಾತ್ಮಯೋಧ ಕರ್ನಲ್ ಸಂತೋಷ್ ಬಾಬು
ಹುತಾತ್ಮಯೋಧ ಕರ್ನಲ್ ಸಂತೋಷ್ ಬಾಬು

ನವದೆಹಲಿ: ಚೀನಾ ಯೋಧರಿಂದ ಹತ್ಯೆಗೀಡಾಗಿ ಹುತಾತ್ಮರಾದ ಸೇನಾ ಅಧಿಕಾರಿಯನ್ನು ತೆಲಂಗಾಣ ಮೂಲದ ಕರ್ನಲ್ ಸಂತೋಷ್ ಬಾಬು ಎಂದು ಗುರುತಿಸಲಾಗಿದೆ.

ಭಾರತ ಮತ್ತು ಚೀನಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಭಾರತದ ಮೂವರು ಸೈನಿಕರು ಮೃತಪಟ್ಟಿದ್ದು, ಈ ಪೈಕಿ ತೆಲಂಗಾಣ ರಾಜ್ಯದ ಸೂರ್ಯಪೇಟ್ ನಿವಾಸಿ ಕರ್ನಲ್ ಸಂತೋಷ್ ಎಂಬವರು ಗಡಿಯಲ್ಲಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಸೇನೆಯ ಅಧಿಕಾರಿಗಳು ಸಂತೋಷ್ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಸೇನಾಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಕರ್ನಲ್ ಸಂತೋಷ್ ಕಳೆದ ಒಂದೂವರೆ ವರ್ಷಗಳಿಂದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಇದೀಗ ಪತ್ನಿ ಸಂತೋಶಿ, ಮಗಳು ಅಭಿನಯಾ (09) ಮತ್ತು ಮಗ ಅನಿರುದ್ಧ (04) ಅವರನ್ನು ಅಗಲಿದ್ದಾರೆ. 

ಮೃತ ಸಂತೋಷ್ ಅವರು ಕೊರುಕೊಂಡ ಸೈನಿಕ್ ಶಾಲೆಯಲ್ಲಿ ಶಿಕ್ಷಣವನ್ನು ಪೂರೈಸಿದ್ದರು. ತಂದೆ ಉಪೇಂದರ್ ಸ್ಟೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಸತೋಷ್ 2004 ರಲ್ಲಿ ಭಾರತೀಯ ಸೇನೆಯಲ್ಲಿ ಸೇರಿಕೊಂಡಿದ್ದು ಜಮ್ಮುವಿನಲ್ಲಿ ನಿಯೋಜನೆಗೊಂಡಿದ್ದರು. ಪಾಕಿಸ್ತಾನದ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಂತೋಷ್ ಮೂವರು ಉಗ್ರರನ್ನು ಹೊಡೆದುರುಳಿಸಿದ್ದರು ಎಂದು ಅವರ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com