ಭಾರತದ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ: ಪರಿಷ್ಕೃತ ಫಿಚ್ ರೇಟಿಂಗ್ಸ್

ಭಾರತದ ಆರ್ಥಿಕ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಸಾಗಿರುವುದಾಗಿ ಗುರುವಾರ ಪರಿಷ್ಕೃತ ಫಿಚ್ ರೇಟಿಂಗ್ಸ್ ನಲ್ಲಿ ಹೇಳಲಾಗಿದೆ.  ಕೊರೋನಾವೈರಸ್ ಸಾಂಕ್ರಾಮಿಕ ರೋಗವು ವರ್ಷದ ದೇಶದ ಬೆಳವಣಿಗೆಯ ಭವಿಷ್ಯವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆಮತ್ತು ಹೆಚ್ಚಿನ ಸಾರ್ವಜನಿಕ - ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳನ್ನು ಬಹಿರಂಗಪಡಿಸಿದೆ ಎಂದಿದೆ.
ಫಿಚ್ ರೇಟಿಂಗ್ಸ್
ಫಿಚ್ ರೇಟಿಂಗ್ಸ್

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಸಾಗಿರುವುದಾಗಿ ಗುರುವಾರ ಪರಿಷ್ಕೃತ ಫಿಚ್ ರೇಟಿಂಗ್ಸ್ ನಲ್ಲಿ ಹೇಳಲಾಗಿದೆ.  ಕೊರೋನಾವೈರಸ್ ಸಾಂಕ್ರಾಮಿಕ ರೋಗವು ವರ್ಷದ ದೇಶದ ಬೆಳವಣಿಗೆಯ ಭವಿಷ್ಯವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆಮತ್ತು ಹೆಚ್ಚಿನ ಸಾರ್ವಜನಿಕ - ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳನ್ನು ಬಹಿರಂಗಪಡಿಸಿದೆ ಎಂದಿದೆ.

ಮತ್ತೊಂದು ರೇಟಿಂಗ್ ಏಜೆನ್ಸಿ ಮೂಡಿ ಈ ತಿಂಗಳ ಆರಂಭದಲ್ಲಿ ಭಾರತದ ಸಾರ್ವಭೌಮ ರೇಟಿಂಗ್ ಅನ್ನು 22 ವರ್ಷಗಳಲ್ಲಿ ಮೊದಲ ಬಾರಿಗೆ 'ಬಾ 2' ನ ಕಡಿಮೆ ಹೂಡಿಕೆ ದರ್ಜೆಗೆ ಇಳಿಸಿದ ನಂತರ ಈ ಬೆಳವಣಿಗೆಯಾಗಿದೆ. 

ಫಿಚ್ ರೇಟಿಂಗ್ಸ್ ಭಾರತದ ದೀರ್ಘಕಾಲೀನ ವಿದೇಶಿ-ಕರೆನ್ಸಿ ನೀಡುವವರ ಡೀಫಾಲ್ಟ್ ರೇಟಿಂಗ್ (ಐಡಿಆರ್) ಮೇಲಿನ ದೃಷ್ಟಿಕೋನವನ್ನು ಸ್ಥಿರದಿಂದ ಋಣಾತ್ಮಕವಾಗಿ  ಪರಿಷ್ಕರಿಸಿದೆ ಮತ್ತು ಬಿಬಿಬಿಯಲ್ಲಿ ರೇಟಿಂಗ್ ದೃಢಪಡಿಸಿದೆ. 

ಲಾಕ್ ಡೌನ್ ಕಾರಣದಿಂದಾಗಿ ಮಾರ್ಚ್ 2021  ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಆರ್ಥಿಕ ಚಟುವಟಿಕೆಯು ಶೇಕಡಾ 5 ರಷ್ಟು ಕುಗ್ಗಲಿದೆ ಎಂದು ಫಿಚ್ ನಿರೀಕ್ಷಿಸಿದೆ.

ಕೊರೋನಾ ವೈರಸ್ ಸಾಂಕ್ರಾಮಿಕವು ಈ ವರ್ಷದ ಭಾರತದ ಬೆಳವಣಿಗೆಯ ದೃಷ್ಟಿಕೋನವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆ ಮತ್ತು ಹೆಚ್ಚಿನ ಸಾರ್ವಜನಿಕ-ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳನ್ನು ಬಹಿರಂಗಪಡಿಸಿದೆ. ಮರುಕಳಿಸುವಿಕೆಯು ಮುಖ್ಯವಾಗಿ ಕಡಿಮೆ-ಮೂಲ ಪರಿಣಾಮದಿಂದ ಉಂಟಾಗುತ್ತದೆ  ಎಂದು ಅದು ಹೇಳಿದೆ.

ದೇಶದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಸಮಸ್ಯೆಯು ಮತ್ತಷ್ಟು ಹೆಚ್ಟಾಗಲಿದೆ ಎಂಬುದರ ಬಗ್ಗೆ ಫಿಚ್ ಮುನ್ಸೂಚನೆ ನೀಡಿದೆ. ಸಾಂಕ್ರಾಮಿಕ ರೋಗದ ಪರಿಣಾಮವಾಗಿ ವಿಶೇಷವಾಗಿ ಹಣಕಾಸು ವಲಯದಲ್ಲಿ ಈ ಹಿಂದೆ ಅಂದಾಜು ಮಾಡಿದ್ದಂತೆ ಶೇ.6ರಿಂದ 7 ರಷ್ಟು ಬೆಳವಣಿಗೆಯತ್ತ ಭಾರತ ಮರಳಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಫಿಚ್ ರೇಟಿಂಗ್ಸ್ ಏಜೆನ್ಸಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com