ಭಾರತವನ್ನು ಕೆಣಕಿದ ನೇಪಾಳ: ಬಿಹಾರ ಗಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ತಡೆ, ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆ!

ದೀರ್ಘಕಾಲದ ಮಿತ್ರ ರಾಷ್ಟ್ರ ನೇಪಾಳ ಭಾರತವನ್ನು ಕೆಣಕಿದ್ದು, ಗಡಿಯ ವಿಷಯದಲ್ಲಿ ಕ್ಯಾತೆ ತೆಗೆದಿದೆ. ಬಿಹಾರ-ನೇಪಾಳ ಗಡಿಯಲ್ಲಿ ಪ್ರವಾಹ ರಕ್ಷಣಾ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನೇಪಾಳ ಈ ಪ್ರದೇಶ ತನ್ನದೆಂದು ಹಕ್ಕು ಪ್ರತಿಪಾದನೆಗೆ ಮುಂದಾಗಿದೆ.
ಭಾರತವನ್ನು ಕೆಣಕಿದ ನೇಪಾಳ: ಬಿಹಾರ ಗಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ತಡೆ, ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆ!
ಭಾರತವನ್ನು ಕೆಣಕಿದ ನೇಪಾಳ: ಬಿಹಾರ ಗಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ತಡೆ, ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆ!

ಬಿಹಾರ: ದೀರ್ಘಕಾಲದ ಮಿತ್ರ ರಾಷ್ಟ್ರ ನೇಪಾಳ ಭಾರತವನ್ನು ಕೆಣಕಿದ್ದು, ಗಡಿಯ ವಿಷಯದಲ್ಲಿ ಕ್ಯಾತೆ ತೆಗೆದಿದೆ. ಬಿಹಾರ-ನೇಪಾಳ ಗಡಿಯಲ್ಲಿ ಪ್ರವಾಹ ರಕ್ಷಣಾ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನೇಪಾಳ ಈ ಪ್ರದೇಶ ತನ್ನದೆಂದು ಹಕ್ಕು ಪ್ರತಿಪಾದನೆಗೆ ಮುಂದಾಗಿದೆ.

ಬಿಹಾರದ ಜಲಸಂಪನ್ಮೂಲ ಇಲಾಖೆ (ಡಬ್ಲ್ಯು ಆರ್ ಡಿ) ನಡೆಸುತ್ತಿರುವ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನೇಪಾಳ ಕಾಮಗಾರಿಗೆ ತಡೆ ಹಾಕಿದ್ದು, ವಿವಾದಿತ ಪ್ರದೇಶದಲ್ಲಿ ಈ ಕಾಮಗಾರಿ ನಡೆಯುತ್ತಿದೆ.ಈ ವಿವಾದಿತ ಪ್ರದೇಶ ತನಗೆ ಸೇರಬೇಕಾಗಿದ್ದು, ಇಲ್ಲಿ ಭಾರತ ಸರ್ಕಾರ ಕಾಮಗಾರಿಯನ್ನು ಮುಂದುವರೆಸಬಾರದೆಂದು ನೇಪಾಳ ಸಶಸ್ತ್ರ ಗಡಿ ಪಡೆ (ಎನ್ಎಬಿಎಫ್) ಹೇಳಿದೆ.

ಭಾರತ-ನೇಪಾಳದ ನಡುವೆ ದೀರ್ಘಕಾಲದ ಒಪ್ಪಂದದ ಪ್ರಕಾರ ಈ ಪ್ರದೇಶದಲ್ಲಿ ಪ್ರವಾಹ ರಕ್ಷಣಾ ಕಾಮಗಾರಿ ಮುಂದುವರೆದಿತ್ತು. ನೇಪಾಳದ ನದಿಗಳಾದ ಗಂಡಕಿ, ಲಾಲ್ ಬೆಕಿಯಾ, ಕಮಲ ಗಳಿಂದ ಉಕ್ಕಿ ಹರಿಯುವ ನೀರಿನಿಂದ ಉಂಟಾಗುವ ಪ್ರವಾಹವನ್ನು ತಡೆಗಟ್ಟಲು ನಿರ್ಮಾಣ ಕಾಮಗಾರಿಯನ್ನು ಜಲಸಂಪನ್ಮೂಲ ಇಲಾಖೆ ನಡೆಸುತ್ತಾ ಬಂದಿದೆ.

ಜೂ.15 ರಂದು ಪೂರ್ವ ಚಂಪಾರಣ್ ಗ್ವಾರಿಗೆ ಬಂದ (ಎನ್ಎಬಿಎಫ್) ಈ ಪ್ರದೇಶದ ಭೂಮಿಯಲ್ಲಿ ಪಿಲ್ಲರ್ 345ರಿಂದ 347 ವರೆಗೆ 5೦೦ ಮೀಟರ್ ಗಳಷ್ಟು ಪ್ರದೇಶ ತನ್ನದೆಂದು ಹಕ್ಕು ಪ್ರತಿಪಾದನೆಗೆ ಮುಂದಾಗಿತ್ತು. ಇದರಿಂದಾಗಿ ಒತ್ತಾಯಪೂರ್ವಕವಾಗಿ ಇಂಜಿನಿಯರ್ ಗಳು ಆ ಪ್ರದೇಶದಲ್ಲಿ ನಡೆಯುತ್ತಿದ್ದ ದುರಸ್ತಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಇಷ್ಟು ಸಾಲದೆಂಬಂತೆ ಗಂಡಕ್ ಬ್ಯಾರೇಜ್ಜ್ ನ ಗೇಟ್ ನಂ.೧೮ಕ್ಕೆ ತಡೆ ಹಾಕಿ ಆ ಪ್ರದೇಶಕ್ಕೆ ಯಾವುದೇ ವಸ್ತುಗಳು ಹಾಗೂ ಯಂತ್ರೋಪಕರಣಗಲು ತಲುಪದಂತೆ ನೋಡಿಕೊಂಡಿತ್ತು. ಜೂ.೧೨ ರಂದು ನೇಪಾಳ-ಭಾರತ ಗಡಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದ ೩ ದಿನಗಳ ಬಳಿಕ ನೇಪಾಳದ ಈ ಕೃತ್ಯ ಬಯಲಾಗಿತ್ತು. ಹಿಂದೆಂದೂ ಕಾಣದ ನೇಪಾಳದ ಈ ವರ್ತನೆಯಿಂಡಾಗಿ ಈಗ ಕಾಮಗಾರಿ ಅರ್ಧಕ್ಕೇ ನಿಂತಿದ್ದು, ಮಧ್ಯಪ್ರವೇಶಿಸಿ ಇತ್ಯರ್ಥಗೊಳಿಸುವಂತೆ ಜನಸಂಪನ್ಮೂಲ ಇಲಾಖೆ ಜಲಶಕ್ತಿ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com