ಸಿಆರ್'ಪಿಎಫ್ ಯೋಧ, 5 ವರ್ಷದ ಮಗು ಬಲಿಪಡೆದಿದ್ದ ಇಬ್ಬರು ಉಗ್ರರ ಸದೆಬಡಿದ ಸೇನೆ!

ದಿನಗಳ ಹಿಂದೆ ಬಿಜ್ಬೆಹರಾ ಬಳಿ ಸಿಆರ್'ಪಿಎಫ್ ಯೋಧ ಹಾಗೂ 5 ವರ್ಷದ ಮಗುವನ್ನು ಬಲಿ ಪಡೆದುಕೊಂಡಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅನಂತ್'ನಾಗ್: 3 ದಿನಗಳ ಹಿಂದೆ ಬಿಜ್ಬೆಹರಾ ಬಳಿ ಸಿಆರ್'ಪಿಎಫ್ ಯೋಧ ಹಾಗೂ 5 ವರ್ಷದ ಮಗುವನ್ನು ಬಲಿ ಪಡೆದುಕೊಂಡಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿದೆ. 

ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ವಾಘಾಮಾ ಎಂಬ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸೇನಾಪಡೆಗಳು ಎನ್'ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. 

ಯೋಧ ಹಾಗೂ ಮಗುವನ್ನು ಮೇಲೆ ದಾಳಿ ನಡೆಸಿ, ಹತ್ಯೆ ಮಾಡಿದ್ದ ಉಗ್ರರಿಗಾಗಿ ಸೇನಾಪಡೆಗಳು ಕಾರ್ಯಾಚರಣೆಗಳನ್ನು ನಡೆಸುತ್ತಲೇ ಇತ್ತು. ಇದರಂತೆ ಉಗ್ರರು ವಾಘಾಮಾ ಎಂಬ ಪ್ರದೇಶದಲ್ಲಿ ಅಡಗಿ ಕುಳಿತಿರುವ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಸೇನಾಪಡೆಗಳು ಸ್ಥಳವನ್ನು ಸುತ್ತುವರೆದು ಎನ್'ಕೌಂಟರ್ ನಡೆಸಿದ್ದು, ಇಬ್ಬರನ್ನೂ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com