ಕೊರೊನಿಲ್ ಕೋವಿಡ್ ಗುಣಪಡಿಸಲಿದೆ ಎಂದು ನಾವೆಂದೂ ಹೇಳಿಲ್ಲ:ಯುಟರ್ನ್ ಹೊಡೆದ ಪತಂಜಲಿ ಸಂಸ್ಥೆ
ನವದೆಹಲಿ: ಹರಿದ್ವಾರ ಮೂಲದ ಪತಂಜಲಿ ಸಂಸ್ಥೆ ತಾನು ಕೊರೋನಾವೈರಸ್ ಸೋಂಕಿಗೆ ಔಷಧಿ ತಯಾರಿಸಿದ್ದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಆಯುಷ್ ಸಚಿವಾಲಯ ನೀಡಿದ ನೋಟಿಸ್‌ಗೆ ಉತ್ತರವಾಗಿ ಪತಂಜಲಿ ಸಂಸ್ಥೆ ಈ ಹೇಳಿಕೆ ನೀಡಿದೆ.
"ಪತಂಜಲಿ ಕರೋನಾ ಔಷಧಿ ತಯಾರಿಸುವುದಾಗಿ ಎಂದಿಗೂ ಹೇಳಿಕೊಂಡಿಲ್ಲ. ಬದಲಿಗೆ, ಕರೋನಾ ರೋಗಿಗಳನ್ನು ಈ ಔಷಧಿಯಿಂದ ಗುಣಪಡಿಸಲಾಗಿದೆ.ಆಯುಷ್ ಸಚಿವಾಲಯ ನೀಡಿದ ಪರವಾನಗಿ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ" ಎಂದು ಪತಂಜಲಿ ಆಯುರ್ವೇದ ಸಿಇಒ ಆಚಾರ್ಯ ಬಾಲಕೃಷ್ಣ ಅವರು ನೋಟಿಸ್‌ಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
"ನಾವು ತುಳಸಿ ಗಿಲೋಯ್ ಅಶ್ವಗಂಧರ ಸಂಯೋಜನೆ ಹೊಂದಿದ ಸುಧಾರಿತ ಔಷಧಿ ತಯಾರಿಸಿದ್ದೇವೆ. ಮತ್ತು ಈ ಔಷಧಿ ಕೋವಿಡ್ ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಲಾಗಿ ಅವರು ಗುಣಹೊಂದಿದ್ದಾರೆ. ನಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಮತ್ತು ಆಯುಷ್ ಸಚಿವಾಲಯವು ಬಯಸಿದರೆ ನಾವು ಇನ್ನೊಮ್ಮೆ ಈ ಪ್ರಯೋಗ ಕೈಗೊಳ್ಳಲು ಸಿದ್ದವಿದ್ದೇವೆ."
ಇತ್ತೀಚೆಗೆ , ಪತಂಜಲಿ ಆಯುರ್ವೇದ, ನಿಮ್ಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ,ಕೊರೋನಾ ರೋಗಿಗಳನ್ನು ಗುಣಪಡಿಸುವುದಾಗಿ ಹೇಳಲಾಗಿದ್ದ ಕೊರೊನಿಲ್ ಮತ್ತು ಶ್ವಾಸರಿ ವಾಟಿ ಎಂಬ ಔಷಧವನ್ನು ಪತಂಜಲಿ ಸಂಸ್ಥೆ ಬಿಡುಗಡೆಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ