![ಸಂಗ್ರಹ ಚಿತ್ರ](http://media.assettype.com/kannadaprabha%2Fimport%2F2020%2F3%2F4%2Foriginal%2Fcoronavirus-MEA.jpg?w=480&auto=format%2Ccompress&fit=max)
ನವದೆಹಲಿ: ವಿದೇಶಗಳಲ್ಲಿರುವ 17 ಮಂದಿ ಭಾರತೀಯರಲ್ಲಿ ಮಾರಕ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಲೋಕಸಭಾ ಕಲಾಪದಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ವಿದೇಶಾಗ ಇಲಾಖೆ ರಾಜ್ಯ ಸಚಿವ ವಿ ಮುರಳೀಧರನ್ ಅವರು, ವಿದೇಶಗಳಲ್ಲಿರುವ 17 ಮಂದಿ ಭಾರತೀಯರಲ್ಲಿ ಮಾರಕ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಪೈಕಿ ಜಪಾನ್ ದೇಶ ದಿಗ್ಭಂಧನ ಹೇರಿರುವ ಕ್ರೂಸ್ ಹಡಗಿನಲ್ಲಿರುವ ಒಟ್ಟು ಭಾರತೀಯರ ಪೈಕಿ 16 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಯುಎಇಯಲ್ಲಿರುವ ಓರ್ವ ಭಾರತೀಯರಲ್ಲಿ ಸೋಂಕು ಕಂಡುಬಂದಿದೆ ಎಂದು ಹೇಳಿದರು.
ಅಂತೆಯೇ ಕೊರೇನಾ ವೈರಸ್ ಕೇಂದ್ರ ಸ್ಥಾನವಾಗಿರುವ ಚೀನಾದಿಂದ ಒಟ್ಟು 766 ಮಂದಿಯನ್ನು ಭಾರತಕ್ಕೆ ಕರೆತರಲಾಗಿದ್ದು, ಈ ಪೈಕಿ 723 ಮಂದಿ ಭಾರತೀಯ ಮತ್ತು 43 ಮಂದಿ ವಿದೇಶಗರಿದ್ದಾರೆ. ಇದಲ್ಲದೆ ಜಪಾನ್ ನಲ್ಲಿ ದಿಗ್ಭಂಧನ ಹೇರಿರುವ ಕ್ರೂಸ್ ಹಡಗಿನಿಂದ 119 ಮಂದಿ ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಈ ಕಾರ್ಯಾಚರಣೆಗಾಗಿ ಏರ್ ಇಂಡಿಯಾ 2 ವಿಶೇಷ ವಿಮಾನ ನಿಯೋಜನೆ ಮಾಡಿದ್ದು ಇದಕ್ಕಾಗಿ 5.98 ಕೋಟಿ ರೂ ಬಿಲ್ ಕಳುಹಿಸಿದೆ. ಇದಲ್ಲದೆ ಭಾರತೀಯ ಸೇನೆಯ ವಿಶೇಷ ಯುದ್ಧ ವಿಮಾನ ಚೀನಾಗೆ ವೈದ್ಯಕೀಯ ವಸ್ತುಗಳನ್ನು ಹೊತ್ತು ಸಾಗಿದ್ದು, ಅಲ್ಲಿಂದ ವಾಪಸ್ ಬರುವಾಗ ವುಹಾನ್ ನಲ್ಲಿದ್ದ ಭಾರತೀಯರನ್ನು ಕರೆತಂದಿದೆ ಎಂದು ಮುರಳೀಧರನ್ ಮಾಹಿತಿ ನೀಡಿದರು.
Advertisement