ಭಾರತದಲ್ಲಿ 'ಕೊರೋನಾ'ಪೀಡಿತರ ಸಂಖ್ಯೆ 107ಕ್ಕೆ ಏರಿಕೆ,ಕೊಚ್ಚಿ ಏರ್ ಪೋರ್ಟ್ ಗೆ ಬಂದಿಳಿದ 20 ಪ್ರಯಾಣಿಕರು  

ಇಂಗ್ಲೆಂಡಿನಿಂದ ಬಂದಿದ್ದ ಪ್ರಜೆ ಸೇರಿದಂತೆ ದೇಶದಲ್ಲಿ ಕೊರೋನಾ ವೈರಾಣು ಪೀಡಿತರ ಸಂಖ್ಯೆ 107ಕ್ಕೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 
ಭಾರತದಲ್ಲಿ 'ಕೊರೋನಾ'ಪೀಡಿತರ ಸಂಖ್ಯೆ 107ಕ್ಕೆ ಏರಿಕೆ,ಕೊಚ್ಚಿ ಏರ್ ಪೋರ್ಟ್ ಗೆ ಬಂದಿಳಿದ 20 ಪ್ರಯಾಣಿಕರು  

ನವದೆಹಲಿ: ಇಂಗ್ಲೆಂಡಿನಿಂದ ಬಂದಿದ್ದ ಪ್ರಜೆ ಸೇರಿದಂತೆ ದೇಶದಲ್ಲಿ ಕೊರೋನಾ ವೈರಾಣು ಪೀಡಿತರ ಸಂಖ್ಯೆ 107ಕ್ಕೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

14 ಹೊಸ ಕೊರೋನಾ ಪೀಡಿತ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಅಂಕಿಅಂಶದಿಂದ ತಿಳಿದುಬಂದಿದೆ. 

ಕೊರೋನಾ ಹೆಚ್ಚು ಹಬ್ಬುವುದನ್ನು ತಡೆಗಟ್ಟಲು ಕರ್ನಾಟಕ, ಉತ್ತರ ಪ್ರದೇಶ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳು ಶಾಲಾ ಕಾಲೇಜುಗಳಿಗೆ ಈ ತಿಂಗಳ ಅಂತ್ಯದವರೆಗೆ ರಜೆ ಘೋಷಿಸಲಾಗಿದೆ. 

ಇದುವರೆಗೆ ಕೊರೋನಾಕ್ಕೆ ನಲುಗಿ ಹೋಗಿರುವ ದೇಶಗಳಲ್ಲಿ ಚೀನಾದ ನಂತರದ ಸ್ಥಾನದಲ್ಲಿ ಇಟಲಿಯಿದೆ. ಇಲ್ಲಿ 415ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು 11 ಸಾವಿರ ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ವರದಿಯಂತೆ ಪ್ರಪಂಚದಲ್ಲಿ 21 ಸಾವಿರದ 157 ಮಂದಿ ಕೊರೋನಾಕ್ಕೆ ಮೃತಪಟ್ಟಿದ್ದು ಅವರಲ್ಲಿ ಇಟಲಿಯಲ್ಲಿ 1ಸಾವಿರದ 441ಮಂದಿ ಮೃತಪಟ್ಟಿದ್ದಾರೆ.

ಸ್ಪೈನ್ ನಲ್ಲಿ 1,500 ಹೊಸ ಕೊರೋನಾ ಕೇಸುಗಳು ವರದಿಯಾಗಿದ್ದು ಇಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 5 ಸಾವಿರದ 753 ಆಗಿದೆ. ಯುರೋಪ್ ಖಂಡದಲ್ಲಿ ಇಟಲಿಯ ನಂತರ ಸ್ಪೈನ್ ನಲ್ಲಿ ಅಧಿಕವಾಗಿದೆ. ಇಲ್ಲಿ ಒಟ್ಟು 183 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಇರಾನ್ ನಲ್ಲಿ 611 ಮಂದಿ ಸಾವು ನೋವು ಕಂಡಿದ್ದಾರೆ.

ಕಳೆದ ವರ್ಷ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಿತು. ಇಂದು 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. 1,30 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ತಗುಲಿದೆ. ಇದನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ದುಬೈಯಿಂದ ಬಂದಿಳಿದ ವಿಮಾನ: ದುಬೈ ಮೂಲದ ವಿಮಾನ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬಂದಿಳಿದಿದ್ದು ಅದರಲ್ಲಿ 20 ಪ್ರಯಾಣಿಕರು ಆಗಮಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com