ನವದೆಹಲಿ: ನಿರ್ಭಯಾ ಹಂತಕರಿಗೆ ಮತ್ತೆ ಹಿನ್ನಡೆಯಾಗಿದ್ದು, ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಈ ಹಿಂದೆ ಪ್ರಕರಣ ನಡೆದಾಗ ನಾನು ಬಾಲಾಪರಾಧಿಯಾಗಿದ್ದೆ. ಹೀಗಾಗಿ ನನ್ನ ಬಾಲಾಪರಾಧಿಯ ಹಕ್ಕುಗಳನ್ನು ನನಗೆ ಮರಳಿಸುವಂತೆ ಅಪರಾಧಿ ಪವನ್ ಗುಪ್ತಾ ಕೇಳಿದ್ದ. ಅಲ್ಲದೆ ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಕ್ಯುರೇಟಿವ್ ಅರ್ಜಿಯಲ್ಲಿ ಮನವಿ ಮಾಡಿದ್ದ.
ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.
ಎಲ್ಲರ ಚಿತ್ತ ದೆಹಲಿ ಹೈಕೋರ್ಟ್ ನತ್ತ..!!
ಇನ್ನು ನಿರ್ಭಯಾ ಸಾಮೂಹಿಕ ಅತ್ಯಾಚಾರ ನಡೆದ ದಿನ ದೆಹಲಿಯಲ್ಲಿ ಇರಲಿಲ್ಲ ಎಂಬ ಮನವಿಯನ್ನು ವಜಾ ಮಾಡಿದ ವಿಚಾರಣಾ ನ್ಯಾಯಾಲಯದ ತೀರ್ಮಾನ ಪ್ರಶ್ನಿಸಿ ಅಪರಾಧಿ ಮುಖೇಶ್ ಸಿಂಗ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ. ಅತ್ಯಾಚಾರ ನಡೆದ ದಿನ ರಾಷ್ಟ್ರ ರಾಜಧಾನಿಯಲ್ಲಿಲ್ಲ ಎಂಬ ಮುಖೇಶ್ ಮನವಿಯಲ್ಲಿ ಹುರುಳಿಲ್ಲ ಎಂದು ತಳ್ಳಿಹಾಕಿತ್ತು .ಮರಣದಂಡನೆ ಜಾರಿ ಆದೇಶ ಒಂದಲ್ಲ ಒಂದು ಅಡ್ಡಿ ಬರುತ್ತಲೇ ಇದೆ . ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಆಗುತ್ತಲೇ ಇದೆ. ಜನರ ಕೂತುಹಲವೂ ಹೆಚ್ಚಾಗುತ್ತಿದೆ. ಹೈಕೋರ್ಟ್ ತೀರ್ಮಾನ ಸಹಜವಾಗಿ ಆಸಕ್ತಿ ಕೆರಳಿಸಿದೆ. ಎಲ್ಲರ ಚಿತ್ತ ಅತ್ತ ನೆಟ್ಟಿದೆ. ಅಪರಾಧಿ ಮತ್ತು ದೆಹಲಿ ಸರ್ಕಾರದ ಸಲಹೆಗಾರರ ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ತಮ್ಮ ಆದೇಶ ಕಾಯ್ದಿರಿಸಿದ್ದಾರೆ.
Advertisement