ನಿರ್ಭಯಾ ರಕ್ಕಸರಿಗೆ ಕೊನೆಗೂ ಶಿಕ್ಷೆ: ಗಲ್ಲು ಜಾರಿ ಶಿಕ್ಷೆ ಪ್ರಕ್ರಿಯೆ ಹೇಗಿರುತ್ತದೆ? ಇಲ್ಲಿದೆ ಮಾಹಿತಿ...

2012ರಲ್ಲಿ ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಅಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದ್ದು, 8 ವರ್ಷಗಳ ನ್ಯಾಯಾಂಗ ಹೋರಾಟಕ್ಕೆ ಜಯ ದೊರಕಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: 2012ರಲ್ಲಿ ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಅಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದ್ದು, 8 ವರ್ಷಗಳ ನ್ಯಾಯಾಂಗ ಹೋರಾಟಕ್ಕೆ ಜಯ ದೊರಕಿದೆ. 

ದೆಹಲಿಯಲ್ಲಿ 2012ರ ಡಿಸೆಂಬರ್ 6 ರಂದು ರಾತ್ರಿ ಖಾಸಗಿ ಬಸ್ ನಲ್ಲಿ ಸ್ನೇಹಿತನ ಜೊತೆ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮನೆಗೆ ಮರಳುತ್ತಿದ್ದಳು. ಈಕೆಯ ಮೇಲೆ ಬಸ್ಸಿನ ಚಾಲಕ ಹಾಗೂ ಆತನ ಐವರು ಸ್ನೇಹಿತರು ಬಸ್ಸಲ್ಲೇ ಭೀಕರವಾಗಿ ಅತ್ಯಾಚಾರ ಎಸಗಿ ಬಸ್ಸಿನಿಂದ ಹೊರಗೆಸೆದಿದ್ದರು. ಬಳಿಕ ಸಂತ್ರಸ್ತೆಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿ, ನಂತರ ಸಿಂಗಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿ.29ರಂದು ಸಂತ್ರಸ್ತೆ ಸಿಂಗಾಪುರದಲ್ಲಿ ಅಸುನೀಗಿದ್ದರು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 

ಪ್ರಕರಣ ಸಂಬಂಧ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತಲ್ಲದೆ, ಎಲ್ಲೆಡೆ ಅತ್ಯಾಚಾರ ಪ್ರಕರಣದ ವಿರುದ್ಧ ಹೋರಾಟಗಳು ಆರಂಭವಾಗಿದ್ದವು. ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ನಿರ್ಭಯಾ ಪೋಷಕರು ಸತತ 8 ವರ್ಷಗಳ ಕಾಲ ನಿರಂತರ ಕಾನೂನು ಹೋರಾಟ ಮಾಡಿದ್ದು, ಇದರ ಪರಿಣಾಮ ದೋಷಿಗಳಿಗೆ ಇದೀಗ ಗಲ್ಲು ಶಿಕ್ಷೆಯಾಗಿದೆ. ಹಾಗಾದರೆ, ದೋಷಿಗಳಿಗೆ ಗಲ್ಲು ಶಿಕ್ಷೆಯ ಪ್ರಕ್ರಿಯೆ ಹೇಗಿರುತ್ತದೆ. ಆ ಬಗ್ಗೆ ಇಲ್ಲಿದೆ ಮಾಹಿತಿ...

  • ಗಲ್ಲು ಶಿಕ್ಷೆ ಖಾಯಂ ಆಗುತ್ತಿದ್ದಂತೆಯೇ ಗಲ್ಲು ಶಿಕ್ಷೆಯಾಗುವ ಮುಂಜಾನೆ ಅಪರಾಧಿಗಳಿನ್ನು ನಿಗದಿತ ಸಮಯಕ್ಕಿಂತಲೂ ಮುಂಚೆಯೇ ನಿದ್ರೆಯಿಂದ ಎಬ್ಬಿಸಿ, ದೋಷಿಗಳ ಇಚ್ಛೆಯಂತೆ ಬಿಸಿ ನೀರು ಅಥವಾ ತಣ್ಣೀರಿನಲ್ಲಿ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
  • ಅಪರಾಧಿಗಳ ನೆಚ್ಚಿನ ಆಹಾರಗಳನ್ನು ಪೂರೈಸಲಾಗುತ್ತದೆ. ಜೈಲಿನ ಆವರಣದಲ್ಲಿ ಸುತ್ತಾಡಲು ಅವಕಾಶ ಮಾಡಿಕೊಡಲಾಗುತ್ತದೆ. 
  • ಅಪರಾಧಿಗಳ ಆರೋಗ್ಯ ಪರಿಸ್ಥಿತಿ ಕುರಿತು ವೈದ್ಯರು ಪರಿಶೀಲನೆ ನಡೆಸುತ್ತಾರೆ. ಆರೋಗ್ಯ ಸರಿ ಇದ್ದರೆ ನೇಣಿಗೇರಿಸುವ ಪ್ರಕ್ರಿಯೆ ಆರಂಭವಾಗುತ್ತದೆ. 
  • ನೇಣುಗಂಬಕ್ಕೆ ಕರೆದೊಯ್ಯುವ ಮುನ್ನ ಮುಖವನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ನೇಣುಗಂಬ ಬಳಿ ಕಾಲಿಗೆ ಹಗ್ಗ ಕಟ್ಟಲಾಗುತ್ತದೆ. 
  • ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಅಪರಾಧಿಯನ್ನು ಹೆಸರಿನಿಂದ ಗುರುತಿಸುತ್ತಾರೆ. ಗಲ್ಲಿಗೇರಿಸಲು ಹ್ಯಾಂಗ್'ಮನ್'ಗೆ ಸೂಚಿಸುತ್ತಾರೆ. 
  • ಗಲ್ಲು ಶಿಕ್ಷೆ ಪ್ರಕ್ರಿಯೆ ಪೂರ್ಣಗೊಂಡು, ಮೃತದೇಹ ರವಾನೆಯಾಗುವವರೆಗೆ ಇತರೆ ಕೈದಿಗಳನ್ನು ಸೆಲ್ ನಿಂದ ಹೊರಬಿಡುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com