ತೆಲಂಗಾಣದಲ್ಲಿ ಮತ್ತೆ ಎರಡು ಕೊರೋನಾ ಸೋಂಕು ಪ್ರಕರಣ ಪತ್ತೆ: ದೇಶದಲ್ಲಿ 250ಕ್ಕೆ ಏರಿಕೆ 

ತೆಲಂಗಾಣದಲ್ಲಿ ಮತ್ತೆ ಎರಡು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ತೆಲಂಗಾಣದಲ್ಲಿನ ಇಬ್ಬರು ಇಂಡೊನೇಷ್ಯಾ ಪ್ರಜೆಗಳಲ್ಲಿ ಈ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಈ ರಾಜ್ಯದಲ್ಲಿ ಈ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ ಆಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ. ಶಂಕರ್ ತಿಳಿಸಿದ್ದಾರೆ.
ಸೋಂಕು ತಡೆಗಾಗಿ ಔಷಧಿ ಸಿಂಪಡಿಕೆ
ಸೋಂಕು ತಡೆಗಾಗಿ ಔಷಧಿ ಸಿಂಪಡಿಕೆ

ನವದೆಹಲಿ: ತೆಲಂಗಾಣದಲ್ಲಿ ಮತ್ತೆ ಎರಡು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ತೆಲಂಗಾಣದಲ್ಲಿನ ಇಬ್ಬರು ಇಂಡೊನೇಷ್ಯಾ ಪ್ರಜೆಗಳಲ್ಲಿ ಈ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಈ ರಾಜ್ಯದಲ್ಲಿ ಈ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ ಆಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ. ಶಂಕರ್ ತಿಳಿಸಿದ್ದಾರೆ.

ಮಧ್ಯ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ತಲಾ ಎರಡು ಪಾಸಿಟಿವ್  ಪ್ರಕರಣಗಳು ಮೊದಲ ಬಾರಿಗೆ ದೃಢಪಟ್ಟಿದೆ.

ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಈ ಸೋಂಕು ತಗುಲಿದವರ  ಸಂಖ್ಯೆ 52ಕ್ಕೆ ಏರಿಕೆ ಆದ ಹಿನ್ನೆಲೆಯಲ್ಲಿ ಮುಂಬೈ, ಪುಣೆ, ಪಿಂಪ್ರಿ- ಚಿಂಚ್ ವಾಡ್ ಮತ್ತು ನಾಗ ಪುರ ನಗರ ವ್ಯಾಪ್ತಿಯಲ್ಲಿ ಎಲ್ಲಾ ಖಾಸಗಿ ಅಂಗಡಿ, ಕಚೇರಿಗಳನ್ನು ಮಾರ್ಚ್ 31ರವರೆಗೂ ನಿರ್ಬಂಧಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶ ಹೊರಡಿಸಿದ್ದಾರೆ.

ಈ ಮಧ್ಯೆ ಈ ಸೋಂಕು ತಗುಲಿದವರ ಸಂಖ್ಯೆ ದೇಶದಲ್ಲಿ 250 ಕ್ಕೆ ಏರಿಕೆ ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದ ವಿವಿಧ ಕಡೆಗಳಲ್ಲಿ ಹೊಸದಾಗಿ 58 ಪ್ರಕರಣಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com