ದಿನಬಳಕೆ ಸರಕುಗಳ ಸಾಗಾಟಕ್ಕೆ ಕರ್ನಾಟಕದಿಂದ ನಿರ್ಬಂಧ: ಪ್ರಧಾನಿಗೆ ದೂರಿತ್ತ ಕೇರಳ ಸಿಎಂ

ರಾಜ್ಯಕ್ಕೆ ಅಗತ್ಯವಾದ ಸರಕು ಸಾಮಗ್ರಿಗಳನ್ನು ಸಾಗಿಸಲು ನೆರವಾಗುವ ವ ಪ್ರಮುಖ ರಾಜ್ಯ ಹೆದ್ದಾರಿಯನ್ನು ಕರ್ನಾಟಕ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಲ್ಲಿಸಿದ್ದಾರೆ.ಅಲ್ಲದೆ ಕರ್ನಾಟಕದ ಈ ಕ್ರಮದ ಕುರಿತು ತಕ್ಷಣ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. 
ಗಡಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು
ಗಡಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು

ತಿರುವನಂತಪುರಂ:  ರಾಜ್ಯಕ್ಕೆ ಅಗತ್ಯವಾದ ಸರಕು ಸಾಮಗ್ರಿಗಳನ್ನು ಸಾಗಿಸಲು ನೆರವಾಗುವ ವ ಪ್ರಮುಖ ರಾಜ್ಯ ಹೆದ್ದಾರಿಯನ್ನು ಕರ್ನಾಟಕ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಲ್ಲಿಸಿದ್ದಾರೆ.ಅಲ್ಲದೆ ಕರ್ನಾಟಕದ ಈ ಕ್ರಮದ ಕುರಿತು ತಕ್ಷಣ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. 

ವಿರಾಜಪೇಟೆ ಮೂಲಕ ಹಾದುಹೋಗುವ ತಲಚೇರಿ-ಕೊಡಗು  ರಾಜ್ಯ ಹೆದ್ದಾರಿ 30 ಗಡಿಯನ್ನು ಪೋಲೀಸರು ಮುಚ್ಚಿದ್ದಾಗಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಕೇರಳ ಸಿಎಂ ಹೇಳಿದ್ದಾರೆ.ಈ ಮಾರ್ಗವನ್ನು ನಿರ್ಬಂಧಿಸಿದರೆ, ಲಾರಿಗಳು ರಾಜ್ಯವನ್ನು ತಲುಪಲು ಸುತ್ತು ಬಳಸಿ ಹೆಚ್ಚಿನ ದೂರ ಕ್ರಮಿಸಬೇಕಾಗುವುದು ಎಂದು ಅವರು ಹೇಳಿದರು.

ಈ ಮಾರ್ಗವು ಕೇರಳಕ್ಕೆ ಅಗತ್ಯ ವಸ್ತುಗಳ ಸರಬರಾಜಿಗೆ ಮುಖ್ಯವಾಗುತ್ತದೆ. . ಇದನ್ನು ನಿರ್ಬಂಧಿಸಿದರೆ, ಅಗತ್ಯ ಸರಕುಗಳನ್ನು ಸಾಗಿಸುವ ವಾಹನಗಳು ನಮ್ಮ ರಾಜ್ಯವನ್ನು ತಲುಪಲು ಹೆಚ್ಚು ದೂರ ಪ್ರಯಾಣಿಸಬೇಕಾಗುತ್ತದೆ. ರಾಷ್ಟ್ರೀಯ ಲಾಕ್‌ಡೌನ್‌ನ ಪರಿಸ್ಥಿತಿಯಲ್ಲಿ ಇದು ಕೇರಳ ಜನರಿಗೆ ಹೆಚ್ಚಿನ ಕಷ್ಟಕ್ಕೆ ಕಾರಣವಾಗುತ್ತದೆ" ಸಿಎಂ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ.

"ಬಿಕ್ಕಟ್ಟಿನ ಈ ಕ್ಷಣದಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ ಅಡ್ಡಿಯಾಗುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ನೀವು ಹೇಳಿದ್ದಿರಿ" ಪತ್ರದ ಪ್ರತಿಯನ್ನು ಶನಿವಾರ ಇಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ಕೇರಳ ರಾಜ್ಯ ಕೋವಿಡ್ ವಿರುದ್ಧ ವ್ಯಾಪಕ ಹೊಆಟ ನಡೆಸಿದ್ದು ಅಗತ್ಯ ಸರಕುಗಳ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ವಿಜಯನ್ ಮೋದಿಯವರನ್ನು ವಿನಂತಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com