ಕೊರೋನಾ ಲಾಕ್ ಡೌನ್: ಮನೆಯಲ್ಲಿ ಯೋಗ, ಧ್ಯಾನ ಮಾಡಿ, ಫಿಟ್ ಆಗಿ ಇರಿ, ಬಿಜೆಪಿಯಿಂದ ವಿಡಿಯೊ ಬಿಡುಗಡೆ

ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಭಾರತ ಲಾಕ್ ಡೌನ್ ನ್ನು ಘೋಷಿಸಿ 6 ದಿನಗಳು ಕಳೆದಿವೆ.
ಕೊರೋನಾ ಲಾಕ್ ಡೌನ್: ಮನೆಯಲ್ಲಿ ಯೋಗ, ಧ್ಯಾನ ಮಾಡಿ, ಫಿಟ್ ಆಗಿ ಇರಿ, ಬಿಜೆಪಿಯಿಂದ ವಿಡಿಯೊ ಬಿಡುಗಡೆ
Updated on: 

ನವದೆಹಲಿ: ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಭಾರತ ಲಾಕ್ ಡೌನ್ ನ್ನು ಘೋಷಿಸಿ 6 ದಿನಗಳು ಕಳೆದಿವೆ.

ಜನರು ತಮ್ಮ ನಿತ್ಯದ ವ್ಯವಹಾರ, ಕೆಲಸ ಕಾರ್ಯಗಳಿಗೆ ವಿರಾಮ ನೀಡಿ ಮನೆಯೊಳಗೆ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮನೆಯಲ್ಲಿ ಸುಮ್ಮನೆ ಕೂರುವುದೆಂದರೆ ಯಾರಿಗಾದರೂ ಬೇಜಾರು, ಸುಮ್ಮನೆ ಕುಳಿತಾಗ ಕೆಟ್ಟ ಯೋಚನೆಗಳು ಬರುವುದು ಸಹಜ.

ಇಂತಹ ಸಂದರ್ಭದಲ್ಲಿ ಯೋಗ, ಧ್ಯಾನ ಮಾಡಿ, ಇದರಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ನಿಮಗೆ ಸಿಗುತ್ತದೆ ಎಂದು ಭಾರತೀಯ ಜನತಾ ಪಾರ್ಟಿ ಪ್ರಧಾನಿ ಮೋದಿಯವರ ಆನಿಮೇಶನ್ ಚಿತ್ರದ ವಿಡಿಯೊ ಹಾಕಿದೆ. ಹೇಗೆ ಯೋಗ, ಧ್ಯಾನ ಮಾಡಬೇಕೆಂದು ಸೋಷಿಯಲ್ ಮೀಡಿಯಾ ಮೂಲಕ ವಿಡಿಯೊವನ್ನು ತೋರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com