ಕೇರಳ: ಕೊರೋನಾ ವೈರಾಣು ವಿರುದ್ಧ ಹೋರಾಡಿ ಗೆದ್ದ 93-88 ವಯಸ್ಸಿನ ದಂಪತಿ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೋನಾ ಸೋಂಕಿನ ಭಯ ಎಲ್ಲೆಡೆ ಆವರಿಸಿದೆ, ಅಲ್ಲಲ್ಲಿ ಚೇತರಿಕೆ ಕಾಣುತ್ತಿರುವ ವರದಿಗಳು ಬರುತ್ತಿದ್ದರೂ ಸಾಮಾಜಿಕ ವಲಯದಲ್ಲಿ ವೈರಸ್ ನ್ನು ಎದುರಿಸಿ ಗೆಲ್ಲುವ ಬಗ್ಗೆ ಇನ್ನೂ ಆತ್ಮವಿಶ್ವಾಸ ಮೂಡಬೇಕಿದೆ. ಇದಕ್ಕೆ ಪೂರಕವಾಗುವ ವರದಿಯೊಂದು ಇಲ್ಲಿದೆ. 
ಇಟಾಲಿಯಿಂದ ವಾಪಸ್ಸಾಗಿದ್ದ ಕೇರಳದ ಕುಟುಂಬ
ಇಟಾಲಿಯಿಂದ ವಾಪಸ್ಸಾಗಿದ್ದ ಕೇರಳದ ಕುಟುಂಬ

ಕೊಟ್ಟಾಯಂ: ಕೊರೋನಾ ಸೋಂಕಿನ ಭಯ ಎಲ್ಲೆಡೆ ಆವರಿಸಿದೆ, ಅಲ್ಲಲ್ಲಿ ಚೇತರಿಕೆ ಕಾಣುತ್ತಿರುವ ವರದಿಗಳು ಬರುತ್ತಿದ್ದರೂ ಸಾಮಾಜಿಕ ವಲಯದಲ್ಲಿ ವೈರಸ್ ನ್ನು ಎದುರಿಸಿ ಗೆಲ್ಲುವ ಬಗ್ಗೆ ಇನ್ನೂ ಆತ್ಮವಿಶ್ವಾಸ ಮೂಡಬೇಕಿದೆ. ಇದಕ್ಕೆ ಪೂರಕವಾಗುವ ವರದಿಯೊಂದು ಇಲ್ಲಿದೆ. 

ಕೊರೋನಾ ನಿರ್ವಹಣೆಯಲ್ಲಿ ಕೇರಳ ಸರ್ಕಾರ ಕೈಗೊಂಡಿರುವ ಕ್ರಮಗಳು ಗಮನ ಸೆಳೆಯುತ್ತಿರುವಾಗಲೇ ಕೇರಳದ ವೃದ್ಧ ದಂಪತಿ ಕೊರೋನಾವನ್ನು ಆತ್ಮವಿಶ್ವಾಸದಿಂದ ಎದುರಿಸಿ ಗುಣಮುಖರಾಗಿದ್ದಾರೆ. 93 ವರ್ಷದ ಥಾಮಸ್ ಅವರ 88 ವರ್ಷದ ಪತ್ನಿ ಮರಿಯಮ್ಮ  ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದು, ಉಳಿದ ಸೋಂಕಿತರ ಕೊರೋನಾ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾರೆ. 

ಥಾಮಸ್ ಹಾಗೂ ಮರಿಯಮ್ಮ ಅವರ ಪುತ್ರರ ಪೋಷಕರಾಗಿದ್ದಾರೆ. ಕೇರಳದಲ್ಲಿ ಕೊರೋನಾ ಪೀಡಿತ ವೃದ್ಧರ ಚೇತರಿಕೆಯ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಈ ಪ್ರಕರಣ ವಿಶೇಷವೆನಿಸಿದೆ. ಥಾಮಸ್ ದಂಪತಿಗೆ 20 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ಸತತ 2 ನೇ ಬಾರಿಯೂ ಕೊರೋನಾ ಪರೀಕ್ಷೆಯಲ್ಲಿ ನೆಗೆಟೀವ್ ಬಂದಿರುವುದರಿಂದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com