ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮೆಟ್ರೋ ನಗರಗಳು ರೆಡ್ ಜೋನ್ ಗೆ: ಕೆಂಪು, ಕಿತ್ತಳೆ, ಹಸಿರು ವಲಯಗಳ ಹೊಸ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ

ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ನಾನಾ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳೆಂದು ವರ್ಗೀಕರಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಂಆಡಿದೆ  ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ  ಬೆಂಗಳುರು ಸೇರಿದಂತೆ ಎಲ್ಲಾ ಮೆಟ್ರೋ ನಗರಗಳನ್ನು. ಕೆಂಪು ವಲಯ (ರೆಡ್ ಜೋನ್) ನಲ್ಲಿರಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ 
ಬೆಂಗಳೂರು ಸೇರಿದಂತೆ ಎಲ್ಲಾ ಮೆಟ್ರೋ ನಗರಗಳು ರೆಡ್ ಜೋನ್ ಗೆ
ಬೆಂಗಳೂರು ಸೇರಿದಂತೆ ಎಲ್ಲಾ ಮೆಟ್ರೋ ನಗರಗಳು ರೆಡ್ ಜೋನ್ ಗೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ನಾನಾ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳೆಂದು ವರ್ಗೀಕರಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ  ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ  ಬೆಂಗಳುರು ಸೇರಿದಂತೆ ಎಲ್ಲಾ ಮೆಟ್ರೋ ನಗರಗಳನ್ನು. ಕೆಂಪು ವಲಯ (ರೆಡ್ ಜೋನ್) ನಲ್ಲಿರಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ

ರೆಡ್ ಜೋನ್ ಗೆ ಸೇರಿದ ನಗರಗಳಲ್ಲಿ ಹೈದರಾಬಾದ್ ಮತ್ತು ಅಹಮದಾಬಾದ್  ಸಹ ಇದ್ದು ಮೇ 3 ರ ನಂತರ ಲಾಕ್‌ಡೌನ್ ತೆಗೆಯುವ  ಯೋಜನೆಯನ್ನು ಅಂತಿಮಗೊಳಿಸಲು ಈ ಪಟ್ಟಿ ಕೇಂದ್ರಕ್ಕೆ ನೆರವಾಗಲಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ವ್ಯಾಪಾರ ವ್ಯವಹಾರಗಳಿಗೆ ಅನುಕೂಲವಾಗಲಿದೆಯೆ, ಅಥವಾ ಚಟುವಟಿಕೆಗಳ ಮೇಲಿನ ಕಂಬಳ ನಿಷೇಧ ಮುಂದುವರಿಯುತ್ತದೆಯೇ ಎನ್ನುವುದನ್ನು ನೋಡಬೇಕಿದೆ.

ಜಿಲ್ಲೆಗಳನ್ನು ರೆಡ್ ಜೋನ್ ಆರೆಂಜ್ ಜೋನ್ ಹಾಗೂ ಗ್ರೀನ್ ಜೋನ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹೊಸ ವರ್ಗೀಕರಣದ ಪ್ರಕಾರ, ಇಲ್ಲಿಯವರೆಗೆ ಯಾವುದೇ ಕೊರೋನಾ ಪ್ರಕರಣಗಲು ವರದಿಯಾಗದ ಥವಾ ಕಳೆದ 21 ದಿನಗಳಲ್ಲಿ  (28 ದಿನಗಳ ಬದಲು) ಯಾವ ಹೊಸ ಪ್ರಕರಣಗಳು ಕಂಡುಬರದ  ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಹೆಸರಿಸಲಾಗುತ್ತದೆ.  

ಮಹಾರಾಷ್ಟ್ರ 10,000 ಕೊರೋನಾ ಕರಣಗಳನ್ನು ದಾಟಿದ್ದು, ದೇಶದ ಅತಿ ಹೆಚ್ಚು ಎಂದರೆ 14 ಜಿಲ್ಲೆಗಳನ್ನು ರೆಡ್ ಜೋನ್ ಗೆ ಸೇರ್ಪಡಿಸಿದೆ.  ದೆಹಲಿಯಲ್ಲಿ 11 ಜಿಲ್ಲೆಗಳು, ತಮಿಳುನಾಡಿನಲ್ಲಿ 12 ಜಿಲ್ಲೆಗಳು, ಉತ್ತರ ಪ್ರದೇಶದ 19 ಜಿಲ್ಲೆಗಳು, ಪಶ್ಚಿಮ ಬಂಗಾಳದ 10 ಜಿಲ್ಲೆಗಳು, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ತಲಾ 9 ಜಿಲ್ಲೆಗಳು ಮತ್ತು ರಾಜಸ್ಥಾನದ 8 ಜಿಲ್ಲೆಗಳು ಕರ್ನಾಟಕದ 3 ಜಿಲ್ಲೆಗಳು ರೆಡ್ ಜೋನ್ ವ್ಯಾಪ್ತಿಯಲ್ಲಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com