ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೀವವನ್ನೇ ಪಣಕ್ಕಿಟ್ಟು ವೈರಸ್ ವಿರುದ್ಧ ದಿಟ್ಟ ಹೋರಾಟ: ಕೊರೋನಾ ವೀರರಿಗಿಂದು ಸೇನಾಪಡೆಗಳಿಂದ ಪುಷ್ಪವೃಷ್ಟಿ ಗೌರವ

ಕೊರೋನಾ ವಾರಿಯರ್ಸ್ ಗಳಿಗೆ ಮೂರು ಸಶಸ್ತ್ರಪಡೆಗಳು ದೇಶದ ಉದ್ದಗಲಕ್ಕೂ ಭಾನುವಾರ ಗೌರವ ಸಲ್ಲಿಸಲಿವೆ. ವಿಮಾನಗಳಿಂದ ಫ್ಲೈ ಪಾಸ್ಟ್ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ದೀಪ ಬೆಳಗುವುದು, ಮತ್ತಿತರ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಗಿದೆ.

ನವದೆಹಲಿ: ಕೊರೋನಾ ವಾರಿಯರ್ಸ್ ಗಳಿಗೆ ಮೂರು ಸಶಸ್ತ್ರಪಡೆಗಳು ದೇಶದ ಉದ್ದಗಲಕ್ಕೂ ಭಾನುವಾರ ಗೌರವ ಸಲ್ಲಿಸಲಿವೆ. ವಿಮಾನಗಳಿಂದ ಫ್ಲೈ ಪಾಸ್ಟ್ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ದೀಪ ಬೆಳಗುವುದು, ಮತ್ತಿತರ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಗಿದೆ. 

ಸಶಸ್ತ್ರ ಮೀಸಲು ಪಡೆಯು ಕೊರೋನಾ ವೈರಸ್ ವಿರುದ್ಧ ಹೋರಾಟಡುತ್ತಿರುವ ಕೊರೋನ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ನೈರ್ಮಲ್ಯ ಕೆಲಸಗಾರರಿಗೆ ಗೌರವ ಸಲ್ಲಿಸಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕಮಾಂಡ್ ಆಸ್ಪತ್ರೆಗಳ ಮೇಲೆ ಇಂದು ಸೇನಾಪಡೆಗಳು ಹೆಲಿಕಾಪ್ಟರ್ ನಿಂದ ಹೂ ಮಳೆ ಸುರಿಸಲಿದೆ. 

ಕೊರೋನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಪ್ರಮುಖ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ 10ಕ್ಕೆ ಕಡಿಮೆ ಶಬ್ಧದಲ್ಲಿ ಬ್ಯಾಂಡ್ ನುಡಿಸಲಾಗುವುದು. ಬಳಿಕ 10.30ರಿಂದ 10.45ರವರೆಗೆ ಐಐ 17 ಹೆಲಿಸೇನಾ ಹೆಲಿಕಾಪ್ಟರ್ ಎರಡೂ ಆಸ್ಪತ್ರೆಗಳ ಮೇಲೆ ಹೂಮಳೆ ಸುರಿಸಲಿದೆ. 

ಸಂಜೆ 3.46ಗಂಡೆ ವಿಧಾನಸೌಧ ಬಳಿ ಸಿ-130ಜೆ ಹರ್ಕ್ಯುಲಸ್ ಪ್ರಯಾಣಿಕರ ವಿಮಾನದ ಮೂಲಕ ಫ್ಲೈಪಾಸ್ಟ್ ಎಂದು ಕರೆಯುವ ಗೌರವ ಹಾರಾಟ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com