ಆರೋಗ್ಯ ಸೇತು ಅಪ್ಲಿಕೇಷನ್: ದೇಶದಲ್ಲಿ 10 ಕೋಟಿ ಮಂದಿ ಡೌನ್ ಲೋಡ್

ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಗಳ ಮೇಲೆ ನಿಗಾ ಇರಿಸುವುದಕ್ಕಾಗಿ ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ಆರೋಗ್ಯ ಸೇತು ಆಪ್ ಗೆ ದೇಶದಲ್ಲಿ ಆದರಣೆ ಹೆಚ್ಚುತ್ತಿದೆ.
ಆ್ಯಪ್ ಫೋಟೋ
ಆ್ಯಪ್ ಫೋಟೋ
Updated on

ನವದೆಹಲಿ: ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಗಳ ಮೇಲೆ ನಿಗಾ ಇರಿಸುವುದಕ್ಕಾಗಿ ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ಆರೋಗ್ಯ ಸೇತು ಆಪ್ ಗೆ ದೇಶದಲ್ಲಿ ಆದರಣೆ ಹೆಚ್ಚುತ್ತಿದೆ.

ಏಪ್ರಿಲ್ 2 ರಂದು ಆಪ್ ಬಿಡುಗಡೆಯಾದಗಿನಿಂದ ಈವರೆಗೆ 9.8 ಕೋಟಿ ಮಂದಿ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್ ಮಂಗಳವಾರದಿಂದ ಜಿಯೋ ಫಿಚರ್ ಫೋನ್ ಗಳಲ್ಲೂ ಲಭ್ಯವಾಗಲಿದೆ. ಆರೋಗ್ಯ ಸೇತು ಆಪ್ ನಲ್ಲಿ ಸಂಗ್ರಹವಾಗಿರುವ ದತ್ತಾಂಶ ಸಂರಕ್ಷಣೆಗಾಗಿ ಎಲ್ಲಾ ಜಾಗ್ರತೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉನ್ನತಾಧಿಕಾರ ಗಂಪಿನ ಅಧ್ಯಕ್ಷ ಅಜಯ್ ಸಾಹ್ನಿ ತಿಳಿಸಿದ್ದಾರೆ.

ಕೊರೊನಾ ಸಂಬಂಧಿಸದಂತೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳಿಗೆ ಮಾತ್ರವೇ ಆರೋಗ್ಯ ಸೇತು ದತ್ತಾಂಶ ಲಭ್ಯವಾಗಲಿದೆ, ಖಾಸಗಿತನ ಕುರಿತು ಕಳವಳ ಪಡಬೇಕಾದ ಆಗತ್ಯವಿಲ್ಲ ಎಂದು ನೀತಿ ಆಯೋಗ ಸಿಇಓ ಅಮಿತಾಬ್ ಕಾಂತ್ ಸ್ಪಷ್ಟಪಡಿಸಿದ್ದಾರೆ. ದತ್ತಾಂಶವನ್ನು ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಮಾಡಿದ ಸರ್ವರ್ ನಲ್ಲಿ ಭದ್ರಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು, ವೃತ್ತಿ, ಕಳೆದ 30 ದಿನಗಳಲ್ಲಿ ವಿದೇಶ ಪ್ರವಾಸ ಮಾಡಿದ್ದರೆ, ಅದರ ವಿವರಗಳು ಆಪ್ ನಲ್ಲಿ ರದ್ದಾಗಿರಲಿದೆ. ಅಪ್ ಗೆ ಮಾಹಿತಿ ಲೋಡ್ ಮಾಡಿದ ದತ್ತಾಂಶ ೪೫ ದಿನಗಳಲ್ಲಿ ಶಾಶ್ವತವಾಗಿ ಅಳಿಸಿ ಹೋಗಲಿದೆ. ಒಂದು ವೇಳೆ ಕೊರೊನಾ ಸೋಂಕಿತ ಬಳಕೆದಾರರು ಚೇತರಿಸಿಕೊಂಡ ನಂತರ ಆ ವಿವರಗಳು 60 ದಿನಗಳಲ್ಲಿ ಪೂರ್ಣವಾಗಿ ಅಳಿಸಿಹೋಗಲಿದೆ ಎಂದು ಕಾಂತ್ ವಿವರಿಸಿದ್ದಾರೆ.

ಕಳೆದ ಆರು ವಾರಗಳಲ್ಲಿ ಕೊರೊನಾ ವಿರುದ್ದ ಸಮರದಲ್ಲಿ ಆರೋಗ್ಯ ಸೇತು ಆಪ್ ತಂತ್ರಜ್ಞಾನ ಸಾಧನವಾಗಿ ಪರಿವರ್ತನೆಗೊಂಡು ಮಹತ್ವದ ಪಾತ್ರ ಪೋಷಿಸುತ್ತಿದೆ ಎಂದು ಕಾಂತ್ ತಿಳಿಸಿದರು. ಈ ಆಪ್ ರಹಸ್ಯವಾಗಿರುವ ಹಾಟ್ ಸ್ಪಾಟ್ ಗಳನ್ನು ಗುರುತಿಸಲಿದ್ದು, ಏಪ್ರಿಲ್ 13 ರಿಂದ 20 ನಡುವೆ 130 ಹಾಟ್ ಸ್ಪಾಟ್ ಗಳನ್ನು ಗುರುತಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿದ ವ್ಯಕ್ತಿಗಳು ಸಮೀಪದಲ್ಲಿದ್ದರೆ ಅದನ್ನು ಪತ್ತೆ ಮಾಡಿ ಬಳಕೆದಾರರನ್ನು ಎಚ್ಚರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಆಪ್ ರೂಪಿಸಿದೆ ಐಓಎಸ್ ನೊಂದಿಗೆ ಆಂಡ್ರಾಯಿಡ್ ಸ್ಮಾರ್ಟ್ ಪೋನ್ ಗಳಲ್ಲಿ ಕೂಡಾ ಆರೋಗ್ಯ ಸೇತು ಕಾರ್ಯನಿರ್ವಹಿಸಲಿದೆ. ಬ್ಲೂಟೂತ್ ಆಧಾರದ ಮೇಲೆ ಕಾರ್ಯನಿರ್ವಹಿಸುವ ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಸಹಾಯವಾಣಿ ಸಂಖ್ಯೆಗಳೊಂದಿಗೆ ಆರೋಗ್ಯ ಸಚಿವಾಲಯ ಪ್ರಕಟಿಸುವ ಪೋಸ್ಟ್ ಗಳು, ಇತರ ವಿವರಗಳು, ವೈದ್ಯ ಸಲಹೆಗಳು ಈ ಆಪ್ ನಲ್ಲಿ ಲಭ್ಯವಾಗಲಿವೆ. ಕೊರೊನಾ ಸೋಂಕಿತ ವ್ಯಕ್ತಿ ಸಮೀಪ ಹೋದರೆ ಕೂಡಲೇ ಈ ಆಪ್ ಯಾಂತ್ರಿಕವಾಗಿ ಎಚ್ಚರಿಸುತ್ತದೆ. ಅತ್ಯಂತ ಸುಲಭವಾಗಿ ಬಳಸಬಹುದಾದ ಇದನ್ನು 11 ಭಾಷೆಗಳಲ್ಲಿ ರೂಪಸಲಾಗಿದೆ. ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದರಿಂದ ಎಲ್ಲ ಬಳಕೆದಾರರು ಕೊರೊನಾ ಬಗ್ಗೆ ಜಾಗ್ರತೆವಹಿಸುವ ಜತೆಗೆ ಸರ್ಕಾರಕ್ಕೂ ಕೂಡಾ ಸಹಾಯ ಮಾಡಿದಂತಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com