ಕೊರೊನಾ: ಭಾರತದಲ್ಲಿ ಮತ್ತೆ 100 ಸಾವು, 82 ಸಾವಿರದತ್ತ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 100 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು 3967 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 100 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು 3967 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಶುಕ್ರವಾರದ ವೇಳೆಗೆ ಸೋಂಕಿತರ ಸಂಖ್ಯೆ 81,970 ರಷ್ಟಿದ್ದು ಒಟ್ಟು ಮೃತರ ಸಂಖ್ಯೆ 2649 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಸದ್ಯ 51,401 ಜನರು ಸೋಂಕಿನಿಂದ ಬಳಲುತ್ತಿದ್ದಾರೆ.

ಕಳೆದೊಂದು ದಿನದಲ್ಲಿ 1685 ಜನರು ಗುಣಮುಖರಾಗಿದ್ದು ಒಟ್ಟು 27919 ಜನರು ಅಂದರೆ ಶೇ 33.6 ರಷ್ಟು ಜನರು ಚೇತರಿಸಿಕೊಂಡಿದ್ದಾರೆ. ದೇಶಾದ್ಯಂತ 30 ನಗರಪಾಲಿಕೆ ಪ್ರದೇಶಗಳಲ್ಲಿ ಶೇ 79 ರಷ್ಟು ಸೋಂಕಿತರ ಸಂಖ್ಯೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ನೇತೃತ್ವದ 15 ನೇ ಸಚಿವರ ಗುಂಪಿನ ಸಭೆಯಲ್ಲಿ ತಿಳಿಸಲಾಯಿತು.

ಮಹಾರಾಷ್ಟ್ರದಲ್ಲಿ ಮತ್ತೆ ಅತಿ ಹೆಚ್ಚು 1997 ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 27,524 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಕೂಡ ಸಾವಿರ ದಾಟಿದೆ. 44 ಜನರು ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 1019 ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಮತ್ತೆ 447 ಪ್ರಕರಣಗಳು ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 9674 ಕ್ಕೆ ಏರಿಕೆಯಾಗಿದೆ. ಇನ್ನಿಬ್ಬರು ಮೃತಪಟ್ಟಿದ್ದು ಒಟ್ಟು ಸೋಂಕಿಗೆ ಬಲಿಯಾದವರ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ.

ಗುಜರಾತ್ ನಲ್ಲಿ 407 ಹೊಸ ಪ್ರಕರಣ ಮತ್ತು 20 ಸಾವಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 9674 ಮತ್ತು ಮೃತರ ಸಂಖ್ಯೆ 586 ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಮತ್ತೆ ಎಂಟು ಜನರು ಸೋಂಕಿಗೆ ಬಲಿಯಾಗಿದ್ದು 425 ಹೊಸ ಪ್ರಕರಣಗಳು ವರದಿಯಾಗಿದೆ. ಮೃತರ ಸಂಖ್ಯೆ 123 ಕ್ಕೆ ಮತ್ತು ಸೋಂಕಿತರ ಸಂಖ್ಯೆ 8895 ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಕೊರೊನಾ ಮುಕ್ತ ಎಂದು ಪರಿಗಣಿತವಾಗಿದ್ದ ಗೋವಾದಲ್ಲಿ ಏಳು ಹೊಸ ಪ್ರಕರಣಗಳು ವರದಿಯಾಗಿವೆ. ಮೇ 5 ರಂದು ಗೋವಾದಲ್ಲಿ ಕೊನೆಯಾದಾಗಿ ಪ್ರಕರಣ ವರದಿಯಾಗಿತ್ತು. ಭಾರತದಲ್ಲಿ ಜನವರಿ 30 ರಂದು ಮೊದಲ ಕೊರೊನಾ ವೈರಾಣು ಸೋಂಕು ಪ್ರಕರಣ ವರದಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com