ಲಾಕ್‌ಡೌನ್ ಪವಾಡ? ನಾಲ್ವರು ಅಪರಿಚಿತರ 10 ಲಕ್ಷ ರೂ.ಗಳ ಸಾಲ ತೀರಿಸಿದ ಆ 'ದೇವತಾ ಮನುಷ್ಯ'!

ಈತ ನಿಜಕ್ಕೂ ಕಲಿಯುಗದ ಕರ್ಣನೇ ಸರಿ! ತನಗೆ ನೇರ ಪರಿಚಯವೂ ಇಲ್ಲದ ನಾಲ್ಕು ಜನರ ಬ್ಯಾಂಕ್ ಸಾಲಗಳನ್ನು ತಾನೇ ತೀರಿಸುವ ಮೂಲಕ ಆ ಸಾಲಗಾರರ ಪಾಲಿಗೆ "ದೇವತಾ ಮನುಷ್ಯ'ನಾಗಿ ಈತ ಹೊರಹೊಮ್ಮಿದ್ದಾನೆ. ಹೌದು! ಇದು ನಿಜ, ಹೀಗೆ ತನಗೆ ಪರಿಚಯವೂ ಇಲ್ಲದವರ ಸಾಲಗಳನ್ನು ತೀರಿಸಿದ ವ್ಯಕ್ತಿ ಮಿಜೋರಾಂ ಮೂಲದವನಾಗಿದ್ದು  ಆತ ತನ್ನ ಗುರುತನ್ನು ಬಹಿರಂಗಪಡಿಸಿಕೊಳ್ಲಲು ನಿರಾಕರಿಸಿದ್ದಾರೆ.
ಲಾಕ್‌ಡೌನ್ ಪವಾಡ? ನಾಲ್ವರು ಅಪರಿಚಿತರ 10 ಲಕ್ಷ ರೂ.ಗಳ ಸಾಲ ತೀರಿಸಿದ ಆ 'ದೇವತಾ ಮನುಷ್ಯ'!

ಗುವಾಹತಿ: ಈತ ನಿಜಕ್ಕೂ ಕಲಿಯುಗದ ಕರ್ಣನೇ ಸರಿ! ತನಗೆ ನೇರ ಪರಿಚಯವೂ ಇಲ್ಲದ ನಾಲ್ಕು ಜನರ ಬ್ಯಾಂಕ್ ಸಾಲಗಳನ್ನು ತಾನೇ ತೀರಿಸುವ ಮೂಲಕ ಆ ಸಾಲಗಾರರ ಪಾಲಿಗೆ "ದೇವತಾ ಮನುಷ್ಯ'ನಾಗಿ ಈತ ಹೊರಹೊಮ್ಮಿದ್ದಾನೆ. ಹೌದು! ಇದು ನಿಜ, ಹೀಗೆ ತನಗೆ ಪರಿಚಯವೂ ಇಲ್ಲದವರ ಸಾಲಗಳನ್ನು ತೀರಿಸಿದ ವ್ಯಕ್ತಿ ಮಿಜೋರಾಂ ಮೂಲದವನಾಗಿದ್ದು  ಆತ ತನ್ನ ಗುರುತನ್ನು ಬಹಿರಂಗಪಡಿಸಿಕೊಳ್ಲಲು ನಿರಾಕರಿಸಿದ್ದಾರೆ.

ಹಾಯ ಅಗತ್ಯವಿರುವ ಜನರಿಗೆ ಏನಾದರೂ ಮಾಡುವ ಮೂಲಕ ಅವನು ಸಂತೋಷವಾಗಿರುವಂತೆ ಮಾಡುವುದು ನನ್ನ ಉದ್ದೇಶವೆನ್ನುವ ಆ ವ್ಯಕ್ತಿ ತನ್ನ ಗುರುತನ್ನು ಯಾವ ಕಾರಣಕ್ಕೂ ಬಹಿರಂಗಪಡಿಸಬಾರದೆಂಬ ಕಟ್ಟುನಿಟ್ಟಿನ ಷರತ್ತಿನ ಮೇಲೆ ಸಾಲ ತೀರಿಸಿದ್ದಾರೆ. ಮತ್ತು ಆತ ಇದುವರೆಗೆ ಯಾವ ಪ್ರಚಾರವನ್ನೂ ಬಯಸಿದವರಲ್ಲ. 

9,96,365 ರೂಗಳನ್ನು ವರ್ಗಾವಣೆ ಮಾಡುವ ಮೂಲಕ ಅವರು ಮೂವರು ಮಹಿಳೆಯರು ಸೇರಿದಂತೆ ನಾಲ್ವರ ಸಾಲದ ಖಾತೆ ಮುಚ್ಚಲು ನೆರವಾಗಿದ್ದಾರೆ. ವಿಶೇಷವೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಐಜಾಲ್ ಶಾಖೆಯಲ್ಲಿ ಕೆಲವೇ ಕೆಲವು ಜನರನ್ನು ಹೊರತುಪಡಿಸಿ, ಅವನು ಯಾರೆಂದು ಯಾರಿಗೂ ತಿಳಿದಿಲ್ಲ.

“ನಮ್ಮ ಬ್ಯಾಂಕ್ ಶಾಖೆಯಲ್ಲಿರುವ ನಮ್ಮ ಮೂವರು ಸಹೋದ್ಯೋಗಿಗಳು ಆ ಸಂಭಾವಿತ ವ್ಯಕ್ತಿಯನ್ನು ಸ್ವಲ್ಪ ಸಮಯದಿಂದ ತಿಳಿದಿದ್ದಾರೆ. ಆದ್ದರಿಂದ, ಅವರ ಉದ್ದೇಶದ ಬಗ್ಗೆ ಹೇಳಲು ಒಮೆ ಅವರು ನಮ್ಮನ್ನು ಕಂಡಿದ್ದರು.  ಆಸ್ತಿಯನ್ನು ಅಡಮಾನ ಇಡುವುದರ ಮೂಲಕ ಸ್ವಾವಲಂಬಿಗಳಾಗಿರಲು ಸಾಲವನ್ನು ಪಡೆದ ಕೆಲವು ಜನರನ್ನು ನಾವು ಆರಿಸಿದ್ದೆವು. ಅವರೆಲ್ಲಾ ತಾವು ಸಾಲ ಮರುಪಾವತಿಸಲು ಹೆಣಗಾಡುತ್ತಿದ್ದರು.  ಆಗ ಆ ವ್ಯಕ್ತಿ ಅಂತಹವರ ಸಾಲ ಮರುಪಾವತಿಸಲು ಮುಂದಾದರು. ಅವರು ಅದಕ್ಕಾಗಿ  10 ಲಕ್ಷ ರೂ.ನೆರವು ನೀಡಲು ಮುಂದೆ ಬಂದಿದ್ದರು." ಎಸ್‌ಬಿಐ ಶಾಖೆ ಸಹಾಯಕ ಜನರಲ್ ಮ್ಯಾನೇಜರ್ ಶೆರಿಲ್ ವಾನ್‌ಚಾಂಗ್ ಹೇಳಿದ್ದಾರೆ.

ಸಣ್ಣ ವ್ಯಾಪಾರ, ವಹಿವಾಟು ನಡೆಸುತ್ತಿರುವ ಕೋವಿಡ್ ಲಾಕ್‌ಡೌನ್‌ನಲ್ಲಿ ಸಿಲುಕಿರುವ ಅಂತಹಾ ನಾಲ್ವರನ್ನು ಅವರು ಆಯ್ಕೆ ಮಾಡಿದ್ದಾರೆ ತರುವಾಯಾ ಆ ವ್ಯಕ್ತಿ ಹಣವನ್ನು  ಆನ್ಲೈನ್ಗೆ ವರ್ಗಾವಣೆ ಮಾಡಿದ್ದಾರೆ.ಮರುದಿನ ಫಲಾನುಭವಿಗಳನ್ನು ಕರೆಸಲಾಗಿ ಅವರು ಬಂದಾಗ ಅವರು ಅಡಮಾನ ಇಟ್ಟಿದ್ದ ಭೂ ದಾಖಲೆಗಳನ್ನು ಹಿಂತಿರುಗಿಸಲಾಗಿದೆ ಎಂದು ಶೆರಿಲ್ ಹೇಳಿದರು. ಮೊದಲಿಗೆ ಆ ಸಾಲಗಾರರು ಅಚ್ಚರಿಗೆ ಒಳಗಾಗಿದ್ದರು. ಬಳಿಕ ಅವರಿಗೆ ಎಲ್ಲವನ್ನೂ ವಿವರಿಸಿದಾಗ ಆ ಅಪರಿಚಿತ ವ್ಯಕ್ತಿಗೆ ಧನ್ಯವಾದ ಹೇಳಲು ಅವರು ಪದಗಳನ್ನು ಹುಡುಕತೊಡಗಿದ್ದರು. ಅವರ ಒತ್ತಾಯದ ಮೇರೆಗೆ ಬ್ಯಾಂಕ್ ಆ ವ್ಯಕ್ತಿಯನ್ನು ಶಾಖೆಗೆ ಭೇಟಿ ನೀಡುವಂತೆ ಕೋರಿತ್ತು. ಆದಾಗ್ಯೂ, ಅವರು ಪ್ರಚಾರದ ವಿರುದ್ಧ ದೃಢ ನಿಶ್ಚಯ ಮಾಡಿದ್ದ ಕಾರಣ  ಅವರು ಬರಲು ನಿರಾಕರಿಸಿದರು. ನಾಲ್ಕು ಫಲಾನುಭವಿಗಳಿಗೆ ತಮಗೆ ಬಂದ ಸಹಾಯವನ್ನು ಸಾರ್ವಜನಿಕವಾಗಿ ಪ್ರಕಟಿಸದಂತೆ ಬ್ಯಾಂಕ್ ಕಟ್ಟಪ್ಪಣೆ ಮಾಡಿತ್ತು.ಆದಾಗ್ಯೂ, ಮುವಾನಾ ಎಲ್ ಫನಾಯ್ ಎಂಬ ವ್ಯಕ್ತಿ  "ಗಾರ್ಡಿಯನ್ ಏಂಜೆಲ್" ಗೆ ಧನ್ಯವಾದ ಹೇಳಲು ಸಾಮಾಜಿಕ ಮಾಧ್ಯಮಗಳ ಮೊರೆಹೋದರು. ಅವರು ಕೋಳಿ ಸಾಕಣೆಗಾಗಿ ಸಾಲ ಪಡೆದವರಾಗಿದ್ದಾರೆ. 

ನಾನು ಹಲವಾರು ಹಿನ್ನಡೆಗಳನ್ನು ಅನುಭವಿಸಿದೆ, ಇದು ಕೊರೋನಾ ನಂತರ ಇನ್ನಷ್ಟು ಪರಿಸ್ಥಿತಿ ಹದಗೆಟ್ಟಿತ್ತು. ಆದರೆ ಆ ನಿಗೂಢ ವ್ಯಕ್ತಿ ನನ್ನ ಬಾಕಿ ಮೊತ್ತ 2,46,631 ರೂಗಳನ್ನು ತೀರಿಸಿದ್ದಾರೆ." ಫನಾಯ್ ಬರೆದುಕೊಂಡಿದ್ದಾರೆ.

ಇನ್ನು ಆ ಅಪರಿಚಿತ ವ್ಯಕ್ತಿ ಐಜಾಲ್ ಮೂಲದ ಉದ್ಯಮಿ ಎಂದು ಶೆರಿಲ್ ಹೇಳಿದ್ದಾರೆ."ಅವರು ಈ ಹಿಂದೆ ಸಹ ಅನೇಕರಿಗೆ ಸಹಾಯ ಮಾಡಿದ್ದಾರೆ. ಆದರೆ ಇದು ಮೊದಲ ಬಾರಿ ಅವರು ತಮ್ಮ ಹೆಸರನ್ನು ಮುಚ್ಚಿಟ್ಟು ಸಹಾಯ ಮಾಡಿದ್ದಾರೆ ಎಂದು ಶೆರಿಲ್ ಹೇಲೀದರು. "ಅವರು ಎಸ್‌ಬಿಐನ ಪ್ರಮುಖ ಗ್ರಾಹಕ ಮತ್ತು ನಮ್ಮ ಬ್ಯಾಂಕ್ ವಲಯಗಳಲ್ಲಿ ಚಿರಪರಿಚಿತರಾಗಿದ್ದಾರೆ." ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com