ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ರಸ್ತೆಯಲ್ಲಿ ಉರುಳಾಡುವಂತೆ ಮಾಡಿದ ಪೊಲೀಸ್ ಪೇದೆಯ ಅಮಾನತು

ಇಬ್ಬರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಅವರನ್ನು ರಸ್ತೆಯಲ್ಲಿ ಉರುಳುವಂತೆ ಮಾಡಿದ ಉತ್ತರ ಪ್ರದೇಶದ ಪೊಲೀಸ್ ಪೇದೆಯನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ರಸ್ತೆಯಲ್ಲಿ ಉರುಳಾಡುತ್ತಿರುವ ಕಾರ್ಮಿಕರು
ರಸ್ತೆಯಲ್ಲಿ ಉರುಳಾಡುತ್ತಿರುವ ಕಾರ್ಮಿಕರು

ಹಾಪೂರ್: ಇಬ್ಬರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಅವರನ್ನು ರಸ್ತೆಯಲ್ಲಿ ಉರುಳುವಂತೆ ಮಾಡಿದ ಉತ್ತರ ಪ್ರದೇಶದ ಪೊಲೀಸ್ ಪೇದೆಯನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪೊಲೀಸ್ ಪೇದೆ ಹಾಗೂ ಹೋಮ್ ಗಾರ್ಡ್ ಇಬ್ಬರು ಸೇರಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವರನ್ನು ರೈಲ್ವೆ ಹಳಿ ಪಕ್ಕದಲ್ಲೇ  ರಸ್ತೆಯಲ್ಲಿ ಉರುಳುವಂತೆ ಮಾಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಪೇದೆಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಪೇದೆಯನ್ನು ಅಶೋಕ್ ಮೀನಾ ಮತ್ತು ಹೋಮ್ ಗಾರ್ಡ್ ಶರಫತ್ ಅಲಿ ಎಂದು ಗುರುತಿಸಲಾಗಿದೆ. ಅಶೋಕ್ ಮೀನಾರನ್ನು ಅಮಾನತುಗೊಳಿಸಲಾಗಿದ್ದು, ಅಲಿ ವಿರುದ್ಧ ಕಮಾಂಡೆಂಟ್ ಹೋಮ್ ಗಾರ್ಡ್ ಗೆ ವರದಿ ಕಳುಹಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಮಿಶ್ರಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com