ನೇಪಾಳ ತೋರಿಸಿರುವ ಹೊಸ ಮ್ಯಾಪ್ ಅದರ ಕೃತಕ ಸೃಷ್ಟಿ, ಅದನ್ನು ಒಪ್ಪಲು ಸಾಧ್ಯವಿಲ್ಲ: ಭಾರತ

ಲಿಂಪಿಯಾಧುರಾ, ಲಿಪುಲೆಖ್, ಮತ್ತು ಕಲಾಪಣಿ ಪ್ರದೇಶಗಳು ತನ್ನ ಪ್ರಾಂತ್ಯಕ್ಕೆ ಸೇರಿದ್ದು ಎಂದು ನೇಪಾಳ ಹೇಳುತ್ತಿರುವುದು ಸತ್ಯಕ್ಕೆ ದೂರವಾದದ್ದು, ಇದು ಅದುವೇ ಸೃಷ್ಟಿಸಿಕೊಂಡ ಕೃತಕ  ಪ್ರತಿಪಾದನೆ, ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
ಭಾರತ-ನೇಪಾಳ ಗಡಿಯ ಬಗ್ಗೆ ನಿತಿನ್ ಗಡ್ಕರಿ ಮಾಡಿರುವ ಟ್ವೀಟ್
ಭಾರತ-ನೇಪಾಳ ಗಡಿಯ ಬಗ್ಗೆ ನಿತಿನ್ ಗಡ್ಕರಿ ಮಾಡಿರುವ ಟ್ವೀಟ್

ನವದೆಹಲಿ: ಲಿಂಪಿಯಾಧುರಾ, ಲಿಪುಲೆಖ್, ಮತ್ತು ಕಲಾಪಣಿ ಪ್ರದೇಶಗಳು ತನ್ನ ಪ್ರಾಂತ್ಯಕ್ಕೆ ಸೇರಿದ್ದು ಎಂದು ನೇಪಾಳ ಹೇಳುತ್ತಿರುವುದು ಸತ್ಯಕ್ಕೆ ದೂರವಾದದ್ದು, ಇದು ಅದುವೇ ಸೃಷ್ಟಿಸಿಕೊಂಡ ಕೃತಕ  ಪ್ರತಿಪಾದನೆ, ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.

ಈ ಬಗ್ಗೆ ನೇಪಾಳ ಹೊಸ ಮ್ಯಾಪನ್ನು ಬಿಡುಗಡೆ ಮಾಡಿದ್ದು ಅಲ್ಲದೆ ಭಾರತದಿಂದ ನೇಪಾಳಕ್ಕೆ ಕೊರೋನಾ ವೈರಸ್ ಹಬ್ಬಿದೆ ಎಂದು ಪ್ರಧಾನಿ ಕೆ ಪಿ ಒಲಿ ಟೀಕಿಸಿದ್ದರು.

ನೇಪಾಳ ಸರ್ಕಾರದ ಏಕಪಕ್ಷೀಯ ನಿರ್ಧಾರ ಇದಾಗಿದ್ದು ಇದರ ಹಿಂದೆ ಯಾವುದೇ ಐತಿಹಾಸಿಕ ಸಂಗತಿಗಳು ಮತ್ತು ಪುರಾವೆಗಳನ್ನು ಆಧರಿಸಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಮಾತನಾಡಿ, ಮಾತುಕತೆ ಮೂಲಕ ಬಗೆಹರಿಸಬಹುದಾದ ಎರಡೂ ದೇಶಗಳ ಗಡಿ ಸಮಸ್ಯೆಗಳು ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಅರ್ಥೈಸುವಿಕೆಗೆ ವ್ಯತಿರಿಕ್ತವಾಗಿದೆ ಎಂದು ಹೇಳಿದ್ದಾರೆ.

ಈ ವಿಷಯದಲ್ಲಿ ಭಾರತದ ನಿಯಮಿತ ನಿಲುವಿನ ಬಗ್ಗೆ ನೇಪಾಳಕ್ಕೆ ಚೆನ್ನಾಗಿ ಅರಿವಿದೆ, ಇಂತಹ ನ್ಯಾಯಸಮ್ಮತವಲ್ಲದ ಪ್ರತಿಪಾದನೆಯಿಂದ ದೂರವಿರಲು ಮತ್ತು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತೆ ನಾವು ನೇಪಾಳ ಸರ್ಕಾರವನ್ನು ಒತ್ತಾಯಿಸುತ್ತೇವೆ. ಗಡಿ ಸಮಸ್ಯೆಗಳನ್ನು ಪರಿಹರಿಸಲು ನೇಪಾಳ ನಾಯಕತ್ವವು ರಾಜತಾಂತ್ರಿಕ ಮಾತುಕತೆಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಬ್ರಿಟಿಷರೊಂದಿಗೆ 1816ರಲ್ಲಿ ಉತ್ತರಾಖಂಡದ ಲಿಪುಲೇಖ್ ಪಾಸ್ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರ ಪಶ್ಚಿಮ ಗಡಿ ಭಾರತದ ಪಾಲಾಗಿದೆ ಎಂದು ನೇಪಾಳ ಸುಗೌಲಿ ಒಪ್ಪಂದವನ್ನು ಉಲ್ಲೇಖಿಸಿ ಹೇಳುತ್ತಿದೆ. ಇಲ್ಲಿ ಎರಡೂ ದೇಶಗಳು 1800 ಕಿಲೋ ಮೀಟರ್ ಮುಕ್ತ ಗಡಿಭಾಗವನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com