ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಮಿಡತೆ ಸೈನ್ಯ ದಾಳಿ: ಪಂಜಾಬ್'ನಲ್ಲಿ ಹೈಅರ್ಟ್ ಘೋಷಣೆ, ಡ್ರೋಣ್ ನಿಯೋಜನೆಗೆ ಚಿಂತನೆ

ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಭಾರೀ ಪ್ರಮಾಣದ ಬೆಳೆ ನಾಶ ಮಾಡಿರುವ ಮಿಡತೆ ಸೈನ್ಯ ಬುಧವಾರ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಗೆ ದಾಳಿಯಿತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಿಡತೆ ಸೈನ್ಯವು ಕೊರೋನಾ ಸಂಕಷ್ಟದಿಂದ ಹೈರಾಣಾಗಿರುವ ಮಹಾರಾಷ್ಟ್ರದ ಮತ್ತಷ್ಟು ಪ್ರದೇಶಗಳಿಗೆ ಮುನ್ನುಗ್ಗುವ ಸಾಧ್ಯತೆಗಳಿವೆ...

ನವದೆಹಲಿ: ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಭಾರೀ ಪ್ರಮಾಣದ ಬೆಳೆ ನಾಶ ಮಾಡಿರುವ ಮಿಡತೆ ಸೈನ್ಯ ಬುಧವಾರ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಗೆ ದಾಳಿಯಿತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಿಡತೆ ಸೈನ್ಯವು ಕೊರೋನಾ ಸಂಕಷ್ಟದಿಂದ ಹೈರಾಣಾಗಿರುವ ಮಹಾರಾಷ್ಟ್ರದ ಮತ್ತಷ್ಟು ಪ್ರದೇಶಗಳಿಗೆ ಮುನ್ನುಗ್ಗುವ ಸಾಧ್ಯತೆಗಳಿವೆ. ಅಲ್ಲದೆ, ಈ ವರೆಗೂ ಮಿಡತೆ ದಾಳಿಗೆ ಸಿಲುಕದೇ ಬಚಾವಾಗುತ್ತಿದ್ದ ಪಂಜಾಬ್ ಕೂಡ ಈ ಬಾರಿ ಮಿಡತೆಗಳ ದಾಳಿಗೆ ಸಿಲುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಂಜಾಬ್ ನಲ್ಲಿ ಈಗಾಗಲೇ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಡ್ರೋಣ್ ನಿಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ಈ ಮೂಲಕ ದೇಶವು ಕಳೆದ 26 ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ಮಿಡತೆಗಳ ದಾಳಿಕೆ ತುತ್ತಾಗಲಿದೆ ಎಂದು ಹೇಳಲಾಗುತ್ತಿದೆ. 

ರಾಜಸ್ತಾನ ಮತ್ತು ಗುಜರಾತ್ ಭಾಗಗಳಲ್ಲಿ ಮಿಡತೆಗಳಿಗೆ ಸೇವಿಸಲು ಕೀಟಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಭಾರೀ ಗಾಳಿ ಜತೆ ಮಿಡತೆಗಳು ಭಾರತದ ಇತರೆ ಭಾಗಗಳಿಗೆ ಪ್ರವೇಸುತ್ತಿವೆ. ಈಗಾಗಲೇ 40 ಸಾವಿರ ಹೆಕ್ಟರ್ ಪ್ರದೇಶವನ್ನು ಹಾಳುಗೆಡವಿರುವ ಈ ಕೀಟಗಳಿಂದ ರಾಬಿ ಬೆಳೆಗಳಾದ ಭತ್ತ, ದಾನ್ಯಗಳು ಮತ್ತು ಎಣ್ಣೆ ಬೀಜಗಳ ಬೆಳೆಗಳಿಗೆ ಹಾನಿಯಾಗಿಲ್ಲ. ಆದರೆ, ಖಾರಿಫ್ ಬೆಳೆಗಳಿಗೆ ಹಾನಿಯಾಗಲಿದೆ ಎಂದು ಭಾರತೀಯ ಕೃಷಿ ಸಂಶೋಧಾ ಪ್ರಧಾನ ನಿರ್ದೇಶಕ ತ್ರಿಲೋಚನ ಮೊಹಾಪಾತ್ರ ಅವರು ಎಚ್ಚರಿಕೆ ನೀಡಿದ್ದಾರೆ. 

ಮಿಡತೆ ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವಾಲಯವರು, ರಾಜಸ್ತಾನದ 21 ಜಿಲ್ಲೆಗಳು, ಮಧ್ಯಪ್ರದೇಶ 18, ಗುಜರಾತ್ 2, ಪಂಜಾಬ್ ರಾಜ್ಯದ 1 ಜಿಲ್ಲೆಯಲ್ಲಿ ಮಿಡತೆ ದಾಳಿ ನಡೆಸಿದ್ದು, ಈ ವರೆಗೂ ರಾಜಸ್ತಾನ, ಗುಜರಾತ್ ಪಂಜಾಬ್ ಹಾಗೂ ಮಧ್ಯಪ್ರದೇಶದಲ್ಲಿ 47,308 ಹೆಕ್ಟೇರ್ ಪ್ರದೇಶಗಳಷ್ಟು ನಾಶವಾಗಿವೆ. ಬ್ಹರಿಟನ್ ಮೂಲಕ ಮೈಕ್ರೋನ್ ಕಂಪನಿಯಿಂದ ಈಗಾಗಲೇ 60 ಸ್ಪ್ರೇಯಿಂಗ್ ಯಂತ್ರಗಳನ್ನು ಖರೀದಿ ಮಾಡಲಾಗಿತ್ತು, ಡ್ರೋಣ್ ಗಳನ್ನು ನಿಯೋಜನೆಗಳೊಂದಿ ಮಿಡತೆ ದಾಳಿ ನಿಯಂತ್ರಿಸಲು ಕಾರ್ಯಗಳನ್ನು ನಡೆಸಲಾಗುತ್ತದೆ. 

ಸಾಮಾನ್ಯವಾಗಿ ಈ ಮಿಡತೆಗಳು ಮಾನ್ಸೂನ್ ಆಗಮನವಾಗುವ ದಿನಗಳಂದು ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬೇಸಿಗೆ ಸಂತಾನೋತ್ಪತ್ತಿಗಾಗಿ ಮರುಭೂಮಿ ಪ್ರವೇಶಿಸಲು ಪಾಕಿಸ್ತಾನದ ಮೂಲಕ ಭಾರತಕ್ಕೆ ಆಗಮಿಸುತ್ತವೆ. ಆದರೆ. ಈ ಬಾರಿ ಮುಂಚಿತವಾಗಿಯೇ ದಾಳಿ ನಡೆಸಿವೆ ಎಂದು ವರದಿಗಳಿಂದ ತಿಳಿದುಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com