ನೌಕರರಿಗೆ ವೇತನ ನೀಡಲು ಕೇಂದ್ರದಿಂದ 5 ಸಾವಿರ ಕೋಟಿ ಆರ್ಥಿಕ ನೆರವು ಯಾಚಿಸಿದ ದೆಹಲಿ ಸರ್ಕಾರ

ನೌಕರರಿಗೆ ಸಂಬಳ ನೀಡಲು 5 ಸಾವಿರ ಕೋಟಿ ಆರ್ಥಿಕ ನೆರವು ನೀಡುವಂತೆ ಕೇಂದ್ರಸರ್ಕಾರದ ಬಳಿ ದೆಹಲಿ ಸರ್ಕಾರ ಮನವಿ ಸಲ್ಲಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ನೌಕರರಿಗೆ ಸಂಬಳ ನೀಡಲು 5 ಸಾವಿರ ಕೋಟಿ ಆರ್ಥಿಕ ನೆರವು ನೀಡುವಂತೆ ಕೇಂದ್ರಸರ್ಕಾರದ ಬಳಿ ದೆಹಲಿ ಸರ್ಕಾರ ಮನವಿ ಸಲ್ಲಿಸಿದೆ.

ಈ ಸಂಕಷ್ಟದ ಸಂದರ್ಭದಲ್ಲಿ ದೆಹಲಿ ಜನತೆಗೆ ಕೇಂದ್ರ ಸರ್ಕಾರ ನೆರವು ಸಹಾಯ ಮಾಡುವಂತೆ ಮನವಿ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇತರ ರಾಜ್ಯಗಳು ಪಡೆದಿರುವ ದೆಹಲಿ ವಿಪತ್ತು ಪರಿಹಾರ ನಿಧಿಯಲ್ಲಿ ಯಾವುದೇ  ಹಣಕಾಸು ನೆರವು ಪಡೆದಿಲ್ಲ. ಆದ್ದರಿಂದ 5 ಸಾವಿರ ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡುವುದಾಗಿ ಹಣಕಾಸು ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ನೌಕರರ ಸಂಬಳ ಮತ್ತಿತರ ಸವಲತ್ತು ಪೂರೈಸಲು ತಿಂಗಳಿಗೆ 3, 500 ಕೋಟಿ ಅಗತ್ಯವಿದೆ.  ಎರಡು ತಿಂಗಳಲ್ಲಿ ತಲಾ 500 ಕೋಟಿ  ಜಿಎಸ್ ಟಿ ಸಂಗ್ರಹವಾಗಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನೌಕರರಿಗೆ ವೇತನ ನೀಡಲು 7 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com