ಅಸ್ಸಾಂ: ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ; ಐವರ ಬಂಧನ
ಕರೀಂ ಗಂಜ್: ಅಸ್ಸಾಂನಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ತ್ರಿಪುರಾ ಮೂಲದ ಮಹಿಳೆಯರ ಮೇಲೆ ಅಸ್ಸಾಂನ ಕರೀಂಗಂಜ್ ನಲ್ಲಿ ಆರು ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಮೂಲಗಳ ಪ್ರಕಾರ ಅನಾರೋಗ್ಯ ಪೀಡಿತರಾಗಿದ್ದ ತನ್ನ ತಾಯಿಯನ್ನು ನೋಡುವ ಸಲುವಾಗಿ ಮಹಿಳೆಯರು ಸಿಲ್ಚಾರ್ ನಲ್ಲಿರುವ ಕಾಚರ್ ನಲ್ಲಿರುವ ಕ್ಯಾನ್ಸರ್ ಆಸ್ಪತ್ರೆಗೆ ಆಗಮಿಸಿದ್ದರು. ತಾಯಿಯನ್ನು ನೋಡಿ ಟ್ಯಾಕ್ಸಿ ಮೂಲಕವಾಗಿ ವಾಪಸ್ ತೆರಳುವಾಗ ಟ್ಯಾಕ್ಸಿ ಚಾಲಕ ನೀಲಂ ಬಜಾರ್ ನ ಬೈರಾಗ್ರಾಮ್ ನಲ್ಲಿನ ನಿರ್ಜನ ಪ್ರದೇಶದ ಕಟ್ಟಡದಳೊಗೆ ಕಾರನ್ನು ಒಡಿಸಿಕೊಂಡು ಬಂದಿದ್ದಾನೆ. ಈ ವೇಳೆಗಾಗಲೇ ಅಲ್ಲೇ ಇದ್ದ 4 ಮಂದಿ ಮಹಿಳೆಯನ್ನು ಬಲವಂತವಾಗಿ ಕಟ್ಟಡದೊಳಗೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
ಬಳಿಕ ಯುವತಿಯರ ಬಳಿ ಇದ್ದ ಒಡವೆಗಳು, ಪರ್ಸ್ ಮತ್ತು ಹಣ, ಮೊಬೈರ್ ಅನ್ನು ದೋಚಿ ಪರಾರಿಯಾಗಿದ್ದಾರೆ. ಬಳಿಕ ಸಾವರಿಸಿಕೊಂಡ ಮಹಿಳೆಯರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯರು ನೀಡಿದ ದೂರಿನ ಅನ್ವಯ ಪೊಲೀಸರು ಐವರನ್ನು ಬಂಧಿಸಿದ್ದು, ಮತ್ತೋರ್ವ ಶಂಕಿತ ಆರೋಪಿಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ