ಏನೂ ಮಾಡದೆ ಮಾತನಾಡುವುದು ಆತ್ಮಾವಲೋಕನ ಆಗುವುದಿಲ್ಲ: ಕಪಿಲ್ ಸಿಬಲ್ ಗೆ ಅಧೀರ್ ರಂಜನ್ ಚೌಧರಿ ತಿರುಗೇಟು

ಬಿಹಾರ ವಿಧಾನಸಭೆ ಮತ್ತು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು, ಪಕ್ಷದ ಸ್ಥಿತಿಗತಿ ಬಗ್ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ಏನೂ ಮಾಡದೆ ಮಾತನಾಡುವುದು ಆತ್ಮಾವಲೋಕನ ಎನಿಸುವುದಿಲ್ಲ ಎಂದಿದ್ದಾರೆ.
ಅಧಿರ್ ರಂಜನ್ ಚೌಧರಿ
ಅಧಿರ್ ರಂಜನ್ ಚೌಧರಿ
Updated on

ಕೋಲ್ಕತ್ತಾ: ಬಿಹಾರ ವಿಧಾನಸಭೆ ಮತ್ತು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು, ಪಕ್ಷದ ಸ್ಥಿತಿಗತಿ ಬಗ್ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ಏನೂ ಮಾಡದೆ ಮಾತನಾಡುವುದು ಆತ್ಮಾವಲೋಕನ ಎನಿಸುವುದಿಲ್ಲ ಎಂದಿದ್ದಾರೆ.

ಕಪಿಲ್ ಸಿಬಲ್ ಅವರು ಹಿಂದೆ ಕೂಡ ಈ ರೀತಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅವರಿಗೆ ತೀವ್ರ ಕಳಕಳಿ ಇರುವಂತೆ ಕಾಣುತ್ತಿದ್ದು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎನ್ನುತ್ತಿದ್ದಾರೆ. ಆದರೆ ನಾವು ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಅಥವಾ ಗುಜರಾತ್ ರಾಜ್ಯಗಳ ಚುನಾವಣೆಗಳಲ್ಲಿ ಅವರ ಮುಖವನ್ನೇ ನೋಡಿರಲಿಲ್ಲ, ಏನೂ ಕೆಲಸ ಮಾಡದೆ ಸುಮ್ಮನೆ ಮಾತನಾಡುವುದು ಸರಿಯಲ್ಲ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com