ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಜೈಡಸ್ ಕ್ಯಾಡಿಲಾ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್‌ನ ಅಹಮದಾಬಾದ್ ನಲ್ಲಿರುವ ಜೈಡಸ್ ಬಯೋಟೆಕ್ ಪಾರ್ಕ್‌ನಲ್ಲಿ ಕೋವಿಡ್ - 19 ಲಸಿಕೆ ತಯಾರಿಕೆಯನ್ನು ಶನಿವಾರ ಪರಿಶೀಲಿಸಿದರು. ಲಸಿಕೆ ತಯಾರಿಸಲು ತೊಡಗಿಸಿಕೊಂಡಿರುವ ವಿಜ್ಞಾನಿಗಳನ್ನು ಅವರು  ಅಭಿನಂದಿಸಿದ್ದಾರೆ.

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್‌ನ ಅಹಮದಾಬಾದ್ ನಲ್ಲಿರುವ ಜೈಡಸ್ ಬಯೋಟೆಕ್ ಪಾರ್ಕ್‌ನಲ್ಲಿ ಕೋವಿಡ್ - 19 ಲಸಿಕೆ ತಯಾರಿಕೆಯನ್ನು ಶನಿವಾರ ಪರಿಶೀಲಿಸಿದರು. ಲಸಿಕೆ ತಯಾರಿಸಲು ತೊಡಗಿಸಿಕೊಂಡಿರುವ ವಿಜ್ಞಾನಿಗಳನ್ನು ಅವರು  ಅಭಿನಂದಿಸಿದ್ದಾರೆ.

ಅವರು ಹೈದರಾಬಾದ್‌ನ ಭಾರತ್ ಬಯೋಟೆಕ್ ಹಾಗೂ ಪುಣೆಯ ಸೀರಮ್ ಸಂಸ್ಥೆಯಲ್ಲೂ ಸಹ ಕೊರೊನಾ ಲಸಿಕೆ ತಯಾರಿಕೆಯ ಪ್ರಗತಿಯನ್ನು ಅವರು ಪರಿಶೀಲಿಸಿದರು. ಲಸಿಕೆ ಅಭಿವೃದ್ಧಿ, ಉತ್ಪಾದನಾ ಪ್ರಕ್ರಿಯೆಗಳನ್ನು ಖುದ್ದು ಪರಿಶೀಲಿಸಲು ಅವರು ಶನಿವಾರ ಎಲ್ಲಾ ಮೂರು ನಗರಗಳಲ್ಲಿ  ಪ್ರವಾಸ ನಡೆಸುತ್ತಿದ್ದಾರೆ.

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಹಂತವನ್ನು ತಲುಪುತ್ತಿದ್ದಂತೆ, ಪ್ರಧಾನಿ ಮೋದಿ ಲಸಿಕೆ ತಯಾರಿಕೆಯನ್ನು ಖುದ್ದು ಪರಿಶೀಲಿಸುವ ಜತೆಗೆ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ರೂಪಿಸಲು ಈ ಭೇಟಿ ಕೈಗೊಂಡಿದ್ದಾರೆ.  ಪ್ರಧಾನಿ ವಿಜ್ಞಾನಿಗಳೊಂದಿಗೆ ಮಾತನಾಡಿ, ಲಸಿಕೆ ತಯಾರಿಕೆಯಲ್ಲಿ ಹೊಸ ಬೆಳವಣಿಗೆಗಳ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಕೋವಿಡ್ -19 ಲಸಿಕೆ ತಯಾರಿಕಾ ಸಂಸ್ಥೆಗಳ ಭೇಟಿಯ ಭಾಗವಾಗಿ ಶನಿವಾರ ಮೊದಲು ಜೈಡಸ್ ಬಯೋಟೆಕ್ ಪಾರ್ಕ್ ನಲ್ಲಿ ಮೋದಿ ವಿಜ್ಞಾನಿಗಳೊಂದಿಗೆ ಮಾತನಾಡಿದರು. ಈ ಸಂಬಂಧ ಅವರು ಟ್ವೀಟ್ ಮಾಡಿದ್ದಾರೆ. ಜೈಡಸ್ ಕ್ಯಾಡಿಲ್ಲಾ ಅಭಿವೃದ್ಧಿಪಡಿಸುತ್ತಿರುವ ದೇಶಿಯ ಡಿಎನ್‌ಎ  ಆಧಾರಿತ ಲಸಿಕೆ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ನಾನು ಅಹಮದಾಬಾದ್‌ ನಲ್ಲಿರುವ ಜೈಡಸ್ ಬಯೋಟೆಕ್‌ಗೆ ಭೇಟಿ ನೀಡಿದ್ದೆ. ಈ ಪ್ರಯತ್ನದ ಹಿಂದಿರುವ ತಜ್ಞರ ತಂಡವನ್ನು ನಾನು ಅಭಿನಂದಿಸಿದ್ದೇನೆ. ಈ ಪ್ರಯತ್ನದಲ್ಲಿ ಅವರನ್ನು ಬೆಂಬಲಿಸಲು ಭಾರತ ಸರ್ಕಾರ ಸಕ್ರಿಯವಾಗಿ  ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com