
ನವದೆಹಲಿ: ಹಿಮಾಚಲ ಪ್ರದೇಶ ಜಾನಪದ ಹಾಡುಹಾಡಿ ಭಾರಿ ಪ್ರಶಂಸೆಗೆ ಗ್ರಾಸವಾಗಿರುವ ಕೇರಳದ 9 ತರಗತಿ ಬಾಲಕಿ ಗಾಯನ ಕಲೆಗೆ ಸ್ವತಃ ಪ್ರಧಾನಿ ಮೋದಿ ಫಿದಾ ಆಗಿದ್ದು, ಬಾಲಕಿಯ ಗಾಯನ ಕಲೆ ಕುರಿತು ಮೆಚ್ಚುಗೆ ಸೂಚಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿಯನ್ನು ಬೇರೆ ರಾಜ್ಯದವರು ತಿಳಿದುಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ದಿನದ ಅಂಗವಾಗಿ 2015 ರಲ್ಲಿ ಪ್ರಾರಂಭಿಸಿದ ಕಾರ್ಯಕ್ರಮ ಏಕ ಭಾರತ ಶ್ರೇಷ್ಠ ಭಾರತ. ಅದಕ್ಕಾಗಿ ಕೇರಳದ ಕೇಂದ್ರೀಯ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿ ದೇವಿಕಾ ಮಹಿಮಾಚಲಿ ಹಾಡು “ಚಂಬಾ ಕಿತನೀ ದೂರ್” ಹಾಡನ್ನು ಹಾಡಿದ್ದರು.
ಇದನ್ನು ಹಿಮಾಚಲ ಪ್ರದೇಶದ ಸಿಎಂ ಜಯರಾಮ ಠಾಕೂರ್ ಪ್ರಶಂಸಿ ಟ್ವೀಟ್ ಮಾಡಿದ್ದರು. ಅಲ್ಲದೆ ದೇವಿಕಾ ಹಾಡಿನ ವಿಡಿಯೋ ಶೇರ್ ಮಾಡಿ, ದೇವನಾಡು ಹಿಮಾಚಲ ನಿನ್ನ ಸುಮಧುರ ಧ್ವನಿಯಿಂದ ಸಂತುಷ್ಟವಾಗಿದೆ. ನೀನು ಒಮ್ಮೆ ಹಿಮಾಚಲಕ್ಕೆ ಬಾ. ಇಲ್ಲಿನ ಕಲೆ, ಸಂಸ್ಕೃತಿಯ ಬಗ್ಗೆ ತಿಳಿದುಕೊ ಎಂದು ಆಹ್ವಾನ ನೀಡಿದ್ದರು. ಅವರ ಫೇಸ್ ಬುಕ್ ಪೋಸ್ಟ್ ವೈರಲ್ ಆಗತ್ತಿದ್ದಂತೆಯೇ ಇದೀಗ ಪ್ರಧಾನಿ ಮೋದಿ ಕೂಡ ದೇವಿಕಾರನ್ನು ಹೊಗಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇವಿಕಾ ನಮ್ಮ ಹೆಮ್ಮೆ! ಅವಳ ಸುಮಧುರ ಗಾಯನವು 'ಒನ್ ಇಂಡಿಯಾ, ಗ್ರೇಟ್ ಇಂಡಿಯಾ'ದ ಸಾರವನ್ನು ಬಲಪಡಿಸುತ್ತದೆ! ಎಂದು ಪ್ರಧಾನಿ ಮೋದಿ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ಪ್ರಧಾನಿ ಮೋದಿ ಶ್ಲಾಘನೆ ಕುರಿತು ಪ್ರತಿಕ್ರಿಯೆ ನೀಡಿರುವ ದೇವಿಕಾ, 'ಪ್ರಧಾನಿ ನನ್ನ ಹೆಸರನ್ನು ಪ್ರಸ್ತಾಪಿಸಿ ನನ್ನ ಹಾಡನ್ನು ಹೊಗಳಿದ ನಂತರ ನಾನು ತುಂಬಾ ಖುಷಿಪಟ್ಟಿದ್ದೇನೆ. ಈ ಹಾಡು ಇಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದರು. ಅಂತೆಯೇ ತಮ್ಮ ಭವಿಷ್ಯದ ಕುರಿತು ಮಾತನಾಡಿರುವ ದೇವಿಕಾ ನಾನು ವೈದ್ಯಯಾಗಲು ಬಯಸುತ್ತೇನೆ. ಅಂತೆಯೇ ಉತ್ತಮ ಹಿನ್ನಲೆ ಗಾಯಕಿಯಾಗಲೂ ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
Advertisement